ಚಿಕ್ಕಬಳ್ಳಾಪುರ:
ಆಟೊಗೆ ಟೆಂಪೊ ಡಿಕ್ಕಿ ಹೊಡೆದ
ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ
ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೈಲಾಂಡ್ಲಹಳ್ಳಿ ಗೇಟ್ ಬಳಿ ನಡೆದಿದೆ. ಚಿಂತಾಮಣಿ ನಗರ ಟಿಪ್ಪು ನಗರದ ನಿವಾಸಿ ಅನ್ಸರ್ ಪಾಷಾ ಸಾವು, ಟೆಂಪೋ ಚಾಲಕ ಮಧುವನ್
ಹಾಗೂ ರವಿ ಎಂಬುವರಿಗೆ ಗಂಬೀರ ಗಾಯಗಳಾಗಿವೆ. ನಾಲ್ಕು ಜನರು ಆಟೋದಲ್ಲಿ ಕೋಲಾರದಿಂದ ಚಿಂತಾಮಣಿ ಕಡೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಗಯಾಳುಗಳನ್ನು
ಹೆಚ್ಚಿನ ಚಿಕಿತ್ಸೆಗೆ ಕೋಲಾರ
ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಕುರಿತು ಚಿಂತಾಮಣಿ ಗ್ರಾಮಾಂತರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





