Breaking News

ಖಾಸಗಿ ಕಂಪೆನಿ ಉದ್ಯೋಗಿಗಳ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಅಸ್ತು ಎಂದ ಧಾರವಾಡ ಹೈಕೋರ್ಟ್

ಧಾರವಾಡ: ಖಾಸಗಿ ವಲಯದ ನೌಕರರ ನಿವೃತ್ತಿಯ ವಯಸ್ಸನ್ನು 58 ವರ್ಷದಿಂದ 60 ವರ್ಷಕ್ಕೆ ಏರಿಸಬೇಕು ಎಂಬ ಸರ್ಕಾರದ ಆದೇಶವನ್ನು ಧಾರವಾಡ ಹೈಕೋರ್ಟ್ ನ್ಯಾಯಪೀಠವು ಎತ್ತಿ ಹಿಡಿದಿದೆ. ಈ ಮೂಲಕ ಖಾಸಗಿ ನೌಕರರ ನಿವೃತ್ತಿಯ ವಯೋಮಿತಿ ಹೆಚ್ಚಳಕ್ಕೆ ಅಸ್ತು ಎಂದಿದೆ.

ಕರ್ನಾಟಕ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶಗಳ ತಿದ್ದುಪಡಿ ನಿಯಮಗಳ ಮಾದರಿ ಅನ್ವಯ ನೌಕರರ ನಿವೃತ್ತಿ ವಯಸ್ಸು ಏರಿಸಿ, ಸರ್ಕಾರ ಆದೇಶಿಸಿತ್ತು. ರಾಜ್ಯ ಸರ್ಕಾರದ ಈ ಆದೇಶವನ್ನು ಹರಿಹರದ ಗ್ರಾಸಿಂ ಇಂಡಸ್ಟ್ರೀಸ್ ಕಂಪೆನಿಯು ಪ್ರಶ್ನಿಸಿ, ಹೈಕೋರ್ಟ್ ಮೊರೆ ಹೋಗಿತ್ತು.

ಕಂಪೆನಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠವು 2021, ಸೆಪ್ಟೆಂಬರ್ 17ರಂದು ವಜಾಗೊಳಿಸಿತ್ತು. ಈ ವಜಾ ಆದೇಶವನ್ನು ಪ್ರಶ್ನಿಸಿ ಮತ್ತೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧದ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಅಲ್ಲದೇ 2018ರ ಮಾರ್ಚ್ 17 ಅಥವಾ ನಂತ್ರದಲ್ಲಿ 59 ವರ್ಷಗಳನ್ನು ಪೂರೈಸಿ ನಿವೃತ್ತರಾದವರಿಗೆ ನಿವೃತ್ತಿ ದಿನಾಂಕ ಮತ್ತು ಅವರು 60 ವರ್ಷ ತಲುಪಿದ ದಿನಾಂಕದ ನಡುವಿನ ಅವಧಿಗೆ ಶೇ.50ರಷ್ಟು ವೇತನವನ್ನು ಮರುಪಾವತಿ ಮಾಡಬೇಕು ಎಂದು ಮೇಲ್ಮನವಿದಾರರಿಗೆ ಸೂಚಿಸಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *