Breaking News

ಜಲಾಶಯಕ್ಕೆ ಬಾಗಿನ ಸಮಯದಲ್ಲಿ ಆಯತಪ್ಪಿದ ಸಚಿವರು: ಸ್ವಲ್ಪದರಲ್ಲೇ ಬಚಾವ್

ಬೀದರ್ : ಬೀದರ್ ಜಿಲ್ಲೆಯ ಕಾರಂಜಾ ಜಲಾಶಯ ತುಂಬಿ ಹರಿಯುತ್ತಿದ್ದು, ಸಚಿವ ಈಶ್ವರ್ ಖಂಡ್ರೆ ನದಿಗೆ ಬಾಗಿನ ಅರ್ಪಿಸಲು ಬಂದಿದ್ದರು. ಈ ವೇಳೆ ಸಚಿವ ಈಶ್ವರ್ ಖಂಡ್ರೆ ಆಯಾತಪ್ಪಿ ಮುಗ್ಗರಿಸಿ ಸ್ವಲ್ಪದರಲ್ಲೇ ಜಲಾಶಯಕ್ಕೆ ಬಿಳುವುದರಲ್ಲಿ ಬಚಾವ್ ಆಗಿದ್ದಾರೆ.
7.69 ಸಾಮರ್ಥ್ಯದ ಕಾರಂಜಾ ಜಲಾಶಯ ಈಗಾಗಲೇ ಸುಮಾರು 93ರಷ್ಟು ಭರ್ತಿಯಾಗಿದೆ, ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಕಾರಂಜಾ ಜಲಾಶಯಕ್ಕೆ ಸಚಿವ ಈಶ್ವರ್ ಖಂಡ್ರೆ ಬಾಗಿನ ಅರ್ಪಿಸಲು ಆಗಮಿಸಿದ್ದರು. ಈ ವೇಳೆ ಜಲಾಶಯಕ್ಕೆ ಪೂಜೆ ಸಲ್ಲಿಸಿದ ಬಳಿಕ ಬಾಗಿನದ ತೆಪ್ಪೆಗೆ ಟೆಂಗು ಹಾಕಲು ಮುಂದಾಗಿದ್ದಾರೆ ಈ ವೇಳೆ ಕೆಳಗೆ ಕುಳಿತು ನೀರಲ್ಲಿ ಬಿಟ್ಟು ಮೇಲೇಳುವಾಗ ಆಯಾತಪ್ಪಿದ ಸಚಿವರು, ಅದೃಷ್ಟವಶಾತ್ ತಕ್ಷಣಕ್ಕೆ ಹಿಂಬದಿಯಿದ್ದವರು ಕೈಹಿಡಿದರು ಬಳಿಕ ಸಚಿವರು ಸುಧಾರಿಸಿಕೊಂಡರು.
ಸಚಿವ ಖಂಡ್ರೆಗೆ ಸಚಿವರಾದ ರಹೀಂ ಖಾನ್, ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ್, ಮಾಲಾ ಬಿ ನಾರಾಯಣ, ಎಸ್ಪಿ, ಡಿಸಿ ಸೇರಿ ಹಲವು ಗಣ್ಯರು ಸಾಥ್ ನೀಡಿದರು.

Share News

About BigTv News

Check Also

ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಜಗಳ; ಚಿಕ್ಕಪ್ಪನಿಗೆ ಚಾಕು ಇರಿತ!

ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ …

Leave a Reply

Your email address will not be published. Required fields are marked *