ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಸ್ನೇಹಿತರು ತಲ್ವಾರ್ ನಿಂದ ಹೊಡೆದಾಡಿಕೊಂಡ ಘಟನೆ ತಾಲ್ಲೂಕಿನ ವರೂರು ಗ್ರಾಮದಲ್ಲಿ ನಡೆದಿದ್ದು,ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರನ್ನು ಅರಳಿಕಟ್ಟಿ ಗ್ರಾಮದವರು ಎಂದು ಹೇಳಲಾಗುತ್ತಿದ್ದು, ಇವರಿಬ್ಬರು ಸ್ನೇಹಿತರು ಅಂತಾ ತಿಳಿದು ಬಂದಿದೆ. ಇಂದು ರಾತ್ರಿ ಎಂಟು ಗಂಟೆಯ ಸುಮಾರಿಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದ ಪರಿಣಾಮ ಪರಸ್ಪರ ತಲ್ವಾರ್ ತೆಗೆದುಕೊಂಡು ಹೊಡೆದಾಡಿಕೊಂಡಿದ್ದಾರೆ.
ಹೊಡೆದಾಟದಲ್ಲಿ ಓರ್ವನ ಎರಡೂ ಕೈ ಬೆರಳು ಕಟ್ ಆದ್ರೆ ಇನ್ನೊಬ್ಬನ ಮುಖ ಹಾಗೂ ಕೈಗಳಿಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಧಾರವಾಡ ಜಿಲ್ಲೆಯ ಎಡಿಷನಲ್ ಎಸ್ ಪಿ ಭರಮಣಿ ಹಾಗೂ ಗ್ರಾಮೀಣ ಠಾಣೆಯ ಇನ್ಸೆಕ್ಟರ್ ಮುರುಗೇಶ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

