ಬೆಂಗಳೂರು: ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಅದ್ದೂರಿಯಾಗಿ ಆಚರಣೆ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆಗಳಿಲ್ಲದಂತೆ ಹಬ್ಬ ನಡೆದಿದೆ. ಹಬ್ಬದ ದಿನಂದಂದೇ ಹಲವರು ಗಣೇಶ ವಿಸರ್ಜನೆ ಮಾಡಿದ್ದು, ನಗರದಲ್ಲಿ ಬರೊಬ್ಬರು 3 ಲಕ್ಷ ಗಣಪತಿ ಮೂರ್ತಿಗಳು ವಿರ್ಸಜನೆಗೊಂಡಿವೆ.
ಬೆಂಗಳೂರಿನ,ಹಲಸೂರು ಕೆರೆ, ಯಡಿಯೂರು ಕೆರೆ ಸೇರಿದಂತೆ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 41 ಕೆರೆಗಳಲ್ಲಿ ಶಾಶ್ವತ ಮತ್ತು ತಾತ್ಕಾಲಿಕ ಕಲ್ಯಾಣಿಗಳು, 462 ಮೊಬೈಲ್ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗಿದೆ.
ಕಳೆದ ವರ್ಷ ಗಣೇಶೋತ್ಸವ ಸಂದರ್ಭ ಬೆಂಗಳೂರಿನ ಯಡಿಯೂರು ಕೆರೆಯಲ್ಲಿ 1.75 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿತ್ತು. ಈ ವರ್ಷವೂ ಅದೇ ಪ್ರಮಾಣದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯಾಗುವ ನಿರೀಕ್ಷೆ ಇದೆ.
ಕೇವಲ ಒಂದೇ ದಿನದಲ್ಲಿ ಯಡಿಯೂರು ಕೆರೆಯಲ್ಲಿ ಸುಮಾರು 78,000 ಕ್ಕೂ ಹೆಚ್ಚು ಗೌರಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಇದರಲ್ಲಿ 76000 ಮಣ್ಣಿನ ಮೂರ್ತಿಗಳಾದರೆ, 1,800 ಪೇಪರ್‌ನಿಂದ ತಯಾರಾದ ಮೂರ್ತಿಗಳು ವಿಸರ್ಜನೆಗೊಂಡಿವೆ. ಇನ್ನು 200 ಪಿಓಪಿ ಗೌರಿ ಗಣೇಶ ಮೂರ್ತಿಗಳು ವಿಸರ್ಜನೆಗೊಂಡಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

