Breaking News

ಕಮಲಾವತಿ ನದಿಯಲ್ಲಿ ಕೊಚ್ಚಿ ಹೋದ ಬಾಲಕ

ಸೇಡಂ: ಬಹಿರ್ದೆಸೆಗೆ ಕಮಲಾವತಿ ನದಿ ಬಳಿಗೆ ತೆರಳಿದ ಬಾಲಕನೊಬ್ಬ ಭಾನುವಾರ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ.
ಪಟ್ಟಣದ ದೊಡ್ಡ ಅಗಸಿ ಬಡಾವಣೆಯ ಕೋಲಿವಾಡ ನಿವಾಸಿ ರಾಹುಲ್ ನಾಗಪ್ಪ ಎಳ್ಳಿ (17) ನದಿಯಲ್ಲಿ ಕೊಚ್ಚಿ ಹೋದ ಬಾಲಕ.
ನಾನು ಮತ್ತು ರಾಹುಲ್ ಕಮಲಾವತಿ ನದಿ ಬಳಿಗೆ ಬಹಿರ್ದೆಸೆಗೆ ತೆರಳಿದ್ದೆವು. ರಾಹುಲ್ ಬಹಿರ್ದೆಸೆಗೆ ಸ್ವಲ್ಪ ದೂರ ತೆರಳಿ ನೀರಿಗಿಳಿದಿದ್ದ. ನದಿ ನೀರಿನ ಪ್ರವಾಹ ಹೆಚ್ಚಿತು. ರಾಹುಲ್ ನೀರಲ್ಲಿ ಮುಳುಗಿದ. ವಿಷಯವನ್ನು ನದಿ ಸಮೀಪದಲ್ಲಿದ್ದವರ ಗಮನಕ್ಕೆ ತಂದಾಗ ಅವರು ಸಹಾಯಕ್ಕೆ ಹಗ್ಗ ಎಸೆದರು. ಆದರೆ ಅಷ್ಟರಲ್ಲಿ ರಾಹುಲ್ ಕಣ್ಮರೆಯಾಗಿದ್ದ ಎಂದು ವಿಕಾಸ ಪ್ರಜಾವಾಣಿಗೆ ಮಾಹಿತಿ ನೀಡಿದರು.
ಬಾಲಕ ನದಿಯಲ್ಲಿ ಕಣ್ಮರೆ ಆಗುತ್ತಿದ್ದಂತೆಯೇ ಸ್ಥಳೀಯರು ನದಿಯತ್ತ ದೌಡಾಯಿಸಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದರು ಮೀನುಗಾರರು ನದಿಗೆ ಧುಮುಕಿ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ಸಿಬ್ಬಂದಿ, ಎಸ್‌ಡಿಆರ್‌ಎಫ್ ತಂಡದವರು ದಿನವಿಡೀ ಕಾರ್ಯಾಚರಣೆ ನಡೆಸಿದ್ದು, ಆದರೆ ರಾಹುಲ್ ಪತ್ತೆಯಾಗಲಿಲ್ಲ. ಸ್ಥಳಕ್ಕೆ ಸಿಪಿಐ ಮಹಾದೇವಪ್ಪ ದಿಡ್ಡಿಮನಿ, ಪಿಎಸ್‌ಐ ಮಂಜುನಾಥರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಸ್ಥಳಕ್ಕೆ ಭೇಟಿ ನೀಡಿದರು. ಪುರಸಭೆ ಸದಸ್ಯ ಸಂತೋಷಕುಮಾರ ತಳವಾರ, ರಾಘವೇಂದ್ರ ಮೆಕ್ಯಾನಿಕ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಕಮಲಾವತಿ ನದಿಗೆ ಅಡ್ಡಲಾಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಕಲ್ಲು ಸ್ಫೋಟಿಸಲಾಗುತ್ತಿದೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ದೊಡ್ಡ ತಗ್ಗುಗಳು ನಿರ್ಮಾಣವಾಗಿವೆ. ನದಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಸುಳಿಗಳಾಗಿ ಮಾರ್ಪಡುತ್ತಿದ್ದು, ನದಿಯಲ್ಲಿ ತೆರಳಿದವರು ಸುಳಿಗೆ ಸಿಲುಕುವಂತಾಗುತ್ತಿದೆ. ನಿಧಾನಗತಿಯ ಕಾಮಗಾರಿ ಸೂಕ್ತವಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *