ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಾಣಿಸಿಕೊಂಡಿರುವ ಚಿರತೆ ಇಂದು ಬೆಳಗಿನಜಾವ ನಾಯಿಯನ್ನು ಹೊತ್ತೊಯ್ದ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಕಳೆದ ಎರಡೂರು ದಿನಗಳ ಹಿಂದೆ ಚಿರತೆಯ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಆ ಚಿರತೆ ಸೆರೆಗಾಗಿ ಇದೀಗ ಬೋನು ಇಟ್ಟಿದೆ. ಆದರೆ, ಕವಿವಿಗೆ ಹೊಂದಿಕೊಂಡಿರುವ ರವೀಂದ್ರನಗರದ ಬಸವರಾಜ ತಳವಾರ ಮನೆಯಲ್ಲಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದ ಬಗ್ಗೆ ವರದಿಯಾಗಿದೆ.
ಮನೆಯ ಮುಂದೆ ನಾಯಿಯ ರಕ್ತ ಚೆಲ್ಲಾಡಿದೆ. ಅಲ್ಲದೇ ಚಿರತೆಯ ಹೆಜ್ಜೆ ಗುರುತು ಸಹ ಪತ್ತೆಯಾಗಿದೆ. ಇದರಿಂದ ರವೀಂದ್ರನಗರ ಹಾಗೂ ಹೊಯ್ಸಳನಗರದ ಜನ ಭಯದ ವಾತಾವರಣದಲ್ಲೇ ಕಾಲ ಕಳೆಯುವಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

