ಹುಬ್ಬಳ್ಳಿ: ಹತ್ತು ವರ್ಷಗಳಲ್ಲಿ ಇವರದ್ದು ಒಂದು ಕಾರ್ಯಕ್ರಮ ಇಲ್ಲ. ಬರೋದು ರಾಜ್ಯ ಸರ್ಕಾರವನ್ನು ಬೈಯ್ಯೋದು. ಮೋದಿ ಸಾಹೇಬರು ಉದ್ಘಾಟನೆ ಮಾಡಿರೋ ಎಲ್ಲ ಬಿಲ್ಡಿಂಗ್ ಸೋರುತ್ತಿವೆ. ರಾಮ ಮಂದಿರವೇ ಸೋರುತ್ತಿದೆ. ಇದರ ಬಗ್ಗೆ ಮಾತನಾಡುತ್ತಾರಾ? ಎಂದು ಸಚಿವ ಸಂತೋಷ ಲಾಡ್ ಟೀಕೆ ಮಾಡಿದ್ದಾರೆ
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಫುಡ್ ಸೆಕ್ಯೂರಿಟಿ ಬಿಲ್ ತಂದವರು ಯಾರೂ.? ಮೋದಿ ಅಕ್ಕಿ ಅಕ್ಕಿ ಅಂತಾರೆ ಇದು ಸರಿನಾ? ನೀವು ಇವತ್ತು ಅಕ್ಕಿ ಕೊಡುತ್ತಿದ್ದೀರ. ಅವತ್ತು ಯಾಕೆ ಕೊಡಲಿಲ್ಲ. ತಗೋ ಬೇಕು ತಗೋಬಾರದು ಅನ್ನೋದನ್ನು ಸರ್ಕಾರ ತೀರ್ಮಾನ ಮಾಡುತ್ತದೆ ಎಂದರು.
ಮಹದಾಯಿ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಅವರದೇ ಇತ್ತು. ಗೋವಾ ಅವರದೇ ಇತ್ತು. ಅವಾಗ ಯಾವ ಕ್ಲಿಯರೆನ್ಸ್ ಕೊಡಲಿಲ್ಲ. ಮೊನ್ನೆ ಗೋವಾಗೆ ಅನುಮತಿ ಕೊಟ್ಟಿದ್ದಾರೆ. ಪವರ್ ಲೈನ್ ಹಾಕೋಕೆ ಅನುಮತಿ ಕೊಟ್ಟಿದ್ದಾರೆ. ಅಕ್ಕಿ ಬಿಡಿ ಮೊದಲು ಇದನ್ನು ಮಾತಾಡಿ. ನಾವ ಯಾಕೆ ಮೀಟಿಂಗ್ ಇರೋದನ್ನ ಗಮನಕ್ಕೆ ತರಬೇಕು. ಸರ್ವ ಪಕ್ಷ ನಿಯೋಗ ಹೋದ್ರು ಏನ ಮಾಡಿದ್ರು. ಮೋದಿ ಅವರು ರಾತ್ರಿ ಮಲಗೋವಾಗ ಕಂಪ್ಯೂಟರ್ ನೋಡ್ತಾರೆ. ಪೆಂಡಿಂಗ್ ವರ್ಕ್ ಕ್ಲೀಯರ್ ಮಾಡ್ತಾರೆ. ಹಾಗೆ ಇದನ್ನು ಕ್ಲೀಯರ್ ಮಾಡಿ ಅಂತ ಹೇಳಿ ಎಂದು ಲಾಡ್ ಕಿಡಿಕಾರಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

