ಭೂಗತ ಪಾತಕಿ ಬಚ್ಚಾಖಾನ್ ಪೋಲಿಸರ ಬಲೆಗೆ..
ಹುಬ್ಬಳ್ಳಿ: ಅವಳಿ ನಗರದಲ್ಲಿನ ವ್ಯಕ್ತಿಯೊಬ್ಬರಿಗೆ ತನ್ನ ಸಹಚರರ ಮೂಲಕ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭೂಗತ ಪಾತಕಿ ಬಚ್ಚಾಖಾನ್‌ನನ್ನು ಅವಳಿ ನಗರದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನಲ್ಲಿ ಬಂಧನ ಮಾಡಿದ್ದಾರೆ.
ಅವಳಿ ನಗರದ ಪೊಲೀಸರು ಕಮಿಷನರ್ ಎನ್. ಶಶಿಕುಮಾರ್ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಭೂಗತ ಪಾತಕಿ ಬಚ್ಚಾಖಾನ್‌ನನ್ನು ಬಂಧಿಸಿದ್ದಾರೆ.ಸದ್ಯ ಬಚ್ಚಾಖಾನ್ ಹಾಗೂ ಆತನ ಸಹಚರರನ್ನು ಇದೀಗ ಹುಬ್ಬಳ್ಳಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಬಳ್ಳಾರಿ ಜೈಲ್‌ನಿಂದ ಹೆಂಡತಿ ಆರೋಗ್ಯದ ನೆಪವೊಡ್ಡಿ ಪೆರೋಲ್ ಮೇಲೆ ಹೊರಗಿದ್ದ.
bigtvnews | Hubli Dharwad News | Kannada News | Karnataka News Hubli News | News In Hubli | Local news

