ಹರಿಯಾಣ: ವಿಧಾನಸಭಾ ಚುನಾವಣೆಗೆ 45 ಅಭ್ಯರ್ಥಿಗಳ ಮೂರನೇ ಮತ್ತು ನಾಲ್ಕನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಈ ಮೂಲಕ ಒಟ್ಟು 86 ಅಭ್ಯರ್ಥಿಗಳನ್ನು ಘೋಷಿಸಿದ್ದು, ಕೈತಾಲ್‌ನಿಂದ ಸಂಸದ ರಣದೀಪ್ ಸುರ್ಜೇವಾಲಾ ಅವರ ಪುತ್ರ ಆದಿತ್ಯ ಸುರ್ಜೇವಾಲಾ ಅವರನ್ನು ಕಣಕ್ಕಿಳಿಸಿದೆ.
ನಾಲ್ಕನೇ ಪಟ್ಟಿಯಲ್ಲಿ ಅಂಬಾಲಾ ಕಂಟೋನ್ಮೆಂಟಿನಿಂದ ಪರಿಮಳ್ ಪರಿ, ಪಾಣಿಪತ್ ಗ್ರಾಮಾಂತರದಿಂದ ಸಚಿನ್ ಕುಂದು, ನರ್ವಾನಾದಿಂದ ಸತ್ಬೀರ್ ದುಬ್ಲೇನ್ (ಎಸ್‌ಸಿ), ರಾನಿಯಾದಿಂದ ಸರ್ವಮಿತ್ರ ಕಾಂಬೋಜ್ ಮತ್ತು ಟಿಗಾಂವ್‌ನಿಂದ ರೋಹಿತ್ ನಗರ್ ಅವರನ್ನು ಕಣಕ್ಕಿಳಿಸಿದೆ.
ಮೂರನೇ ಪಟ್ಟಿಯಲ್ಲಿ ಪಂಚಕುಲದಿಂದ ಮಾಜಿ ಉಪ ಮುಖ್ಯಮಂತ್ರಿ ಚಂದರ್ ಮೋಹನ್, ಅಂಬಾಲಾ(ನಗರ)ದಿಂದ ಮಾಜಿ ಸಚಿವ ನಿರ್ಮಲ್ ಸಿಂಗ್, ಜಗದ್ರಿಯಿಂದ ಅಕ್ರಮ್ ಖಾನ್, ಫತೇಹಾಬಾದ್‌ನಿಂದ ಬಲ್ವಾನ್ ಸಿಂಗ್ ದೌಲತ್‌ಪುರಿ, ಹಿಸಾರ್‌ನಿಂದ ರಾಮ್ ನಿವಾಸ್ ರಾರಾ, ಬವಾನಿ ಖೇರಾ (ಎಸ್‌ಸಿ) ದಿಂದ ಪ್ರದೀಪ್ ನರ್ವಾಲ್ ಮತ್ತು ಹಾಥಿನ್‌ನಿಂದ ಇಸ್ರೇಲ್ ಮೊಹಮ್ಮದ್ ಸ್ಪರ್ಧಿಸಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

