ಚಿತ್ರದುರ್ಗ: ನಾಳೆ ನೀರು ಸಿಗದ ಕಾರಣಕ್ಕಾಗಿಯೇ ಬೆಂಗಳೂರಿಗೆ ಹೋಗಿ ನೆಲೆಸಿರುವ ಜನ ವಾಪಾಸು ಬರುವ ಕಾಲ ದೂರವಿಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಬರಮುಕ್ತ ಕರ್ನಾಟಕ ಆಂದೋಲನ ಸಮಿತಿ, ಶ್ರೀಮುರುಘಾಮಠ ಹಾಗು ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯ, ಚಿತ್ರದುರ್ಗ ಇವರುಗಳ ಸಹಯೋಗದಲ್ಲಿ ಮುರುಘಾಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ ತುಂಗ-ಭದ್ರ ಕಣಿವೆ ಮಳೆನೀರು ಕೊಯ್ಲಿನ ಅರಿವಿಗಾಗಿ ಒಂದು ದಿನದ ಅಧ್ಯಯನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುರುಘಾ ಶರಣರು, ರಾಜ್ಯದ ಕೆಲ ಸರ್ಕಾರಗಳು ಸಾಲ ಮುಕ್ತವಾಗಿಸಲು, ಹಸಿವು ಮಕ್ತವಾಗಿಸಲು ಹಾಗೆನೇ ವ್ಯಸನ ಮುಕ್ತವಾಗಿಸಲು ಪ್ರಯತ್ನಪಟ್ಟಿವೆ. ಈ ನಿಟ್ಟಿನಲ್ಲಿ ಈ ಬರ ಮುಕ್ತವೂ ಕೂಡ ಒಂದಾಗಿದ್ದು ಅದು ಸರ್ಕಾರದ ಕಾರ್ಯವಷ್ಟೇ ಅಲ್ಲ ನಮ್ಮ ನಿಮ್ಮೆಲ್ಲರ ಜವಾಬ್ದಾರಿಯೂ ಹೌದು. ನೀರಿನ ಅಭಾವ ಇಂದು ಜ್ವಲಂತ ಸಮಸ್ಯೆಯಾಗಿದೆ. ನಮ್ಮನ್ನು ಸದಾ ಕಾಡುತ್ತಿದೆ. ಎಲ್ಲೆಡೆ ಜಲಕ್ಷಾಮ ಉಂಟಾಗಿ ಮಾನವ ತಾನು ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ. ರಾಜ್ಯದ ಹತ್ತಾರು ಅಣೆಕಟ್ಟುಗಳು ಬರಿದಾಗಿವೆ, ಬಿಕೋ ಎನ್ನುತ್ತಿವೆ. ಹೀಗಿರುವಾಗ ಮಳೆನೀರು ಕೊಯ್ಲು ವಿಧಾನವನ್ನು ಅರಿತು ನಾವು ಅದರ ಉಪಯೋಗ ಪಡೆದುಕೊಳ್ಳಬೇಕು. ಜಲಕ್ಷಾಮ ನಮ್ಮನ್ನು ಕಾಡಬಾರದೆಂದರೆ ನೀವು ಮಳೆನೀರು ಕೊಯ್ಲು ವಿಧಾನ ಅಳವಡಿಸಿಕೊಳ್ಳಿ. ಈ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿರುವ ಡಾ ರಾಜೇಂದ್ರಸಿಂಗ್ ಅವರನ್ನು ಈ ಹಿಂದೆ ಶ್ರೀಮಠಕ್ಕೆ ಕರೆಸಿ ಈ ಕುರಿತು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೀರಿನ ಬವಣೆ ತಪ್ಪಿಸುವಲ್ಲಿ ಮಳೆನೀರು ಕೊಯ್ಲು ಒಂದು ಅತ್ಯುತ್ತಮ ಮಾರ್ಗ ಎಂದು ಶರಣರು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ನ್ಯಾಯವಾದಿ ಮತ್ತು ಬರಮುಕ್ತ ಕರ್ನಾಟಕ ಆಂದೋಲನ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ರವಿವರ್ಮಕುಮಾರ್ ಮಾತನಾಡುತ್ತ, ಯಾವುದೇ ಧರ್ಮ, ಭಾಷೆ, ಮತ, ಜಾತಿ, ಪಂಥದವರಿರಲಿ ಅವರೆಲ್ಲರೂ ಬದುಕಬೇಕಾದರೆ ನೀರು ಬೇಕೇಬೇಕು. ನೀರು ಮನುಷ್ಯನ ಜೀವನದ ಪರಮಶಕ್ತಿ. ಜೀವಸೆಲೆ. ಅಂತಹ ನೀರನ್ನು ನಾವೆಲ್ಲ ಇಂದು ಕಾಪಾಡಬೇಕಾಗಿದೆ. ಅದರಲ್ಲು ನಾವಿಂದು ಮಳೆ ನೀರನ್ನು ಹಿಡಿದಿಡುವಿಕೆಯಲ್ಲಿ ವಿಫಲರಾಗಿದ್ದೇವೆ. ಸಾಕಷ್ಟು ನೀರು ಸಮುದ್ರ ಸೇರಿ ಉಪ್ಪಾಗುತ್ತಿದೆ. ನಾವು ನೀವೆಲ್ಲ ಸೇರಿ ಈಗ ಮಳೆನೀರು ಕೊಯ್ಲು ವಿಧಾನ ಬಳಸಿ ಆ ನೀರು ವ್ಯಯವಾಗದಂತೆ ತಡೆಯಬೇಕಿದೆ. ರೈತರು, ಸಾರ್ವಜನಿಕರು ನೀರಿಗಾಗಿ ಕೊಳವೆಬಾವಿಗಳನ್ನು ಆಶ್ರಯಿಸಿದ್ದಾರೆ. ಆದರೆ ಆ ಕೊಳವೆಬಾವಿ ನೀರು ಪೆÇ್ಲರೈಡ್‍ಯುಕ್ತವಾಗಿ ಮನುಷ್ಯನನ್ನು ಹಲವು ರೋಗಗಳಿಂದ ಕಾಡುತ್ತಿದೆ. ಪೆÇ್ಲರೈಡ್ ತೀಕ್ಷ್ಣತೆ ಎಷ್ಟಿದೆ ಎಂದರೆ ತಾಯಿಯ ಎದೆಹಾಲಿನ ಮುಖಾಂತರವೂ ಮಗುವಿಗೆ ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆನೀರನ್ನು ಹಿಡಿದಿಟ್ಟುಕೊಳ್ಳುವಿಕೆ ಒಂದು ಸೂಕ್ತ ವಿಧಾನ ಎಂದು ಅಭಿಪ್ರಾಯಪಟ್ಟರು.
ನಂತರದಲ್ಲಿ ಮಳೆನೀರು ಕೊಯ್ಲು ಕುರಿತು (ಪೆÇ್ರಜೆಕ್ಟರ್ ಮುಖಾಂತರವಾಗಿ) ಆಗಮಿಸಿದ ವಿಷಯತಜ್ಞರಾದ ಡಾ.ಆರ್.ಎಸ್. ಸಾವರ್‍ಕರ್, ಡಾ. ಲಿಂಗರಾಜು ಎಲ್., ರವೀಂದ್ರ ದೇಸಾಯಿ, ಪೆÇ್ರ.ಮಹಾಲಿಂಗಯ್ಯ, ಉದಯಕುಮಾರ್ ಕೊಲ್ಲಿ, ಡಾ. ನಾಗರಾಜ ಗಂಗೊಳ್ಳಿ ಪೆÇ್ರಜೆಕ್ಟರ್ ಮುಖಾಂತರ ಮಾಹಿತಿ ನೀಡಿದರು.
ಆಂದೋಲನ ಸಮಿತಿಯ ಅಧ್ಯಕ್ಷ ಬೆಡಗಲಾಪುರ ನಾಗೇಂದ್ರ ಎಲ್ಲರನ್ನು ಸ್ವಾಗತಿಸಿದರು. ತಮಿಳುನಾಡಿನ ಗುರುಸ್ವಾಮಿ, ಪಳಿನಿಸ್ವಾಮಿ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಸೇರಿದಂತೆ ಜಿಲ್ಲೆಯ ನೂರಾರು ರೈತರು, ರೈತಮುಖಂಡರುಗಳು ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





