ಹುಬ್ಬಳ್ಳಿ : ಓದಿನಲ್ಲಿ ವೀಕ್ ಇದ್ದ ಕಾರಣ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ಯಲ್ಲಿ ನಡೆದಿದೆ.
ಪ್ರಸಾದ ಹುಲ್ಲಂಬಿ ಜೀವವನ್ನು ಕಳೆದುಕೊಂಡ ಯುವಕ. ವಯಸ್ಸು 18. ಧಾರವಾಡದಲ್ಲಿ NTTF ಮಾಡ್ತಿದ್ದ ಈತ ಗಣೇಶನ ಹಬ್ಬಕ್ಕೆಂದು ಮನೆಗೆ ಬಂದಿದ್ದ. ಮನೆಯಲ್ಲಿ ಎಲ್ಲರ ಜೊತೆ ಸೇರಿ ಹಬ್ಬವನ್ನು ಮಾಡಿದ್ದ. ನಿನ್ನೆ ರಾತ್ರಿ ತಾಯಿಯ ಜೊತೆ ಊಟ ಮಾಡಿ ಅಮ್ಮ ನಾನು ಬೆಳ್ಳಿಗ್ಗೆ ಕಾಲೇಜು ಹೋಗಬೇಕು ಮಲಗ್ತಿನಿ ಅಂತಾ ಹೇಳಿದ್ದಾನೆ.ತಾಯಿ ಬೆಳಗಿನ ಜಾವ ಎದ್ದು ಕಾಲ್ ಮಾಡಿದಾಗ ಪ್ರಸಾದ ಫೋನ್ ರೀಸಿವ್ ಮಾಡಿಲ್ಲ.ಮಗ ಮಲಗಿರಬೇಕು ಅಂತಾ ರೂಮ್’ಗೆ ಹೋಗಿ ನೋಡಿದಾಗ ತಾಯಿಗೆ ಶಾಕ್ ಆಗಿದೆ. ಬೆಳಿಗ್ಗೆ ಕಾಲೇಜು ಹೋಗಬೇಕು ಅಂತಾ ಅಂದಿದ್ದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಶವ ಕಂಡು ತಾಯಿ ಕುಸಿದು ಬಿದ್ದಿದ್ದಾಳೆ.
ವಿದ್ಯಾರ್ಥಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಖುದ್ದು ಕಮಿಷನರ್ ಎನ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆತ್ಮಹತ್ಯೆ ಮಾಡಿಕೊಂಡ ಪ್ರಸಾದನ ತಂದೆ ತಾಯಿಯ ಜೊತೆ ಮಾತನಾಡಿ ಅವರಿಗೆ ಧೈರ್ಯವನ್ನು ತುಂಬಿದರು. ಪ್ರಸಾದ ಓದಿನಲ್ಲಿ ಸ್ವಲ್ಪ ವೀಕ್ ಇದ್ದ ಹೀಗಾಗಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಪ್ರಾಥಮಿಕ ಮಾಹಿತಿ ಇದೀಗ ಲಭ್ಯವಾಗಿದೆ ಅಂತಾ ಕಮಿಷನರ್ ಪ್ರತಿಕ್ರಿಯೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

