ಬೆಂಗಳೂರು: ಇ-ಫಾರ್ಮಸಿಗೆ ಅನುಮತಿ ನೀಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಮೆಡಿಕಲ್ ಶಾಪ್ ಸಂಘಟನೆಗಳು ಇಂದು ದೇಶಾದ್ಯಂತ ಬಂದ್ಗೆ ಕರೆ ನೀಡಿದ್ದಾರೆ.
ಇನ್ನು ಮೆಡಿಕಲ್ ಶಾಪ್ಗಳಲ್ಲೇ ಬಂದ್ ಬಗ್ಗೆ ಭಿನ್ನಾಭಿಪಾಯ್ರವಿದ್ದು ಕೆಲ ಅಸೋಸಿಯೇಶನ್ಗಳು ಬಂದ್ನಿಂದ ಹಿಂದೆ ಸರಿದಿದೆ. ಒಂದೆಡೆ ಅಖಿಲ ಭಾರತ ಔಷಧಿ ಮಾರಾಟ ವ್ಯಾಪಾರಿಗಳ ಸಂಘ(ಎಐಒಸಿಡಿ) ಬಂದ್ಗೆ ಬೆಂಬಲ ಕೊಟ್ರೆ, ಇತ್ತ ಸುವರ್ಣ ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಬಂದ್ಗೆ ವಿರೋಧ ವ್ಯಕ್ತಪಡಿಸಿದೆ. ಸರ್ಕಾರಕ್ಕೆ ಕಾಲಾವಕಾಶವೇ ಕೊಡದೇ ಬಂದ್ ಮಾಡಿದ್ರೆ ರೋಗಿಗಳಿಗೆ ತೊಂದರೆಯಾಗಲಿದೆ. ಹೀಗಾಗಿ ನಾವು ಬಂದ್ಗೆ ಬೆಂಬಲವಿಲ್ಲ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಆವರಣದೊಳಗೆ ಎಲ್ಲಾ ಮೆಡಿಕಲ್ ಶಾಪ್ಗಳು ಕಾರ್ಯನಿರ್ವಹಿಸಲು ಸರ್ಕಾರದಿಂದ ಸೂಚನೆ ನೀಡಲಾಗಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





