Breaking News

ಬ್ಯಾಂಕರ್ಸ್‌ಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ : ಗರಂ ಆದ ಜೋಶಿ

ಧಾರವಾಡ:ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಧ್ಯಕ್ಷತೆಯಲ್ಲಿ ಬ್ಯಾಂಕರ್ಸ್‌ಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.ಜಿಲ್ಲಾ ಲೀಡ್‌ ಬ್ಯಾಂಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲ ರಿಜಿನಲ್ ಮ್ಯಾನೇಜರ್‌ಗಳು ಗೈರಾಗಿದ್ದಕ್ಕೆ ಜೋಶಿ ತೀವ್ರ ಗರಂ ಆದರು.

ಕೇಂದ್ರ ಸಚಿವನೇ ಬಂದು ಸಭೆ ನಡೆಸುತ್ತಿದ್ದೇನೆ ಆದರೂ ಮ್ಯಾನೇಜರ್‌ಗಳು ಬಂದಿಲ್ಲ ಎಂದರೆ ಹೇಗೆ ಎಂದು ತೀವ್ರ ಗರಂ ಆದ ಸಚಿವರು, ನಾಳೆ ಸಭೆ ಮಾಡೋಣ ಬಿಡಿ ಎಂದು ಎದ್ದು ಹೊರಟರು.ಈ ವೇಳೆ ಜಿಲ್ಲಾಧಿಕಾರಿಲು ಸಚಿವರ ಮನವೊಲಿಸಿದ ನಂತರ ಸಚಿವರು ಸಭೆ ಮುಂದುವರೆಸಿದರು.

ಬೆಳೆ ಸಾಲ, ಕೃಷಿ ಸಾಲದ ಕುರಿತಾದ ಪ್ರಗತಿ ಮತ್ತು ಕುಂದು ಕೊರತೆಗಳ ಬಗ್ಗೆ ಸಚಿವರು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ಅಲ್ಲದೇ ಆಯಾ ಬ್ಯಾಂಕ್‌ಗಳಿಂದ ಮಾಹಿತಿ ಪಡೆದು ಪ್ರಗತಿ ಪರಿಶೀಲಿಸಿದರು. ಸಭೆಗೆ ಕೆಲ ಮ್ಯಾನೇಜರ್‌ಗಳು ಗೈರಾಗಿದ್ದಕ್ಕೆ ಲೀಡ್ ಬ್ಯಾಂಕ್‌ ಮ್ಯಾನೇಜ‌ರ್ ಅವರನ್ನು ತರಾಟೆಗೆ ತೆಗೆದುಕೊಂಡ ಜೋಶಿ, ಸಭೆಗಳಿಗೆ ಅವರು ಬರಬೇಕು ಇಲ್ಲದೇ ಹೋದರೆ ಬ್ಯಾಂಕ್ ಮುಂದೆ ರೈತರು ಧರಣಿ ನಡೆಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

Share News

About Shaikh BigTv

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *