Breaking News

ರೈಲ್ವೆ ಕೇಟರಿಂಗ್‍ಆ್ಯಂಡ್ ಟೂರಿಸಂನಿಂದ ಹರಿಹರ್‍ ದರ್ಶನ ಸ್ಪೇಷಲ್‍ ಟೂರ್‍ ಪ್ಯಾಕೇಜ್

ಹುಬ್ಬಳ್ಳಿ: ಇಂಡಿಯನ್ ರೈಲ್ವೇ ಕೇಟರಿಂಗ್ ಆ್ಯಂಡ್ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ ವತಿಯಿಂದಅಂತರಾಷ್ಟ್ರೀಯ ಪ್ರವಾಸಗಳನ್ನು ಉತ್ತೇಜನ ಗೊಳಿಸುವ ಹಿನ್ನೆಲೆಯಲ್ಲಿ ಐ.ಅರ್.ಸಿ.ಟಿ.ಸಿ ಹರಿಹರ ದರ್ಶನ ಸ್ಪೇಷಲ್ ವಿಶೇಷ ಪ್ರವಾಸ ರೈಲ್ವೇ ಸೇವೆಯನ್ನು ಆಗಷ್ಟ್ 19ರಿಂದ ಪ್ರಾರಂಭಿಸಲಾಗುತ್ತಿದೆ ಎಂದು ಸಂಸ್ಥೆಯ ಮೇಲ್ವಿಚಾರಕ ಕಿಶೋರ ಸತ್ಯಾ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಪ್ರವಾಸಿ ರೈಲು ಅಹ್ಮದಾಬಾದ್, ನಿಷ್ಕಾ ಅಲಂಕ ಮಹಾದೇವ,ದ್ವಾರಕಾ, ಬೇಟ್ ದ್ವಾರಕಾ, ನಾಗೇಶ್ವರ, ಸೋಮನಾಥ, ಮಹಾಕಾಳೇಶ್ವರ ಹಾಗೂ ಓಂಕಾರೇಶ್ವರ ದರ್ಶನವನ್ನು ಸಾರ್ವಜನಿಕರಿಗೆ ಒದಗಿಸುವ ಸದುದ್ದೇಶದಿಂದ ಹರಿಹರ ದರ್ಶನ ಟೂರ್ ಪ್ಯಾಕೇಜ್ ಹಮ್ಮಿಕೊಳ್ಳಲಾಗಿದೆ ಎಂದರು. ಪ್ಯಾಕೇಜನಲ್ಲಿ ನಾಲ್ಕು ಜೋತಿರ್ಲಿಂಗಗಳ ದರ್ಶನವನ್ನು ಐ.ಆರ್.ಸಿ.ಟಿ.ಸಿ ವತಿಯಿಂದ ನೀಡಲಾಗುತ್ತಿದ್ದು, ಪ್ಯಾಕೇಜ್ ಗೆ 9980 ಮೊತ್ತವನ್ನು ನಿಗದಿಪಡಿಸಲಾಗಿದೆ.ಅಲ್ಲದೇ ಪ್ಯಾಕೇಜನಲ್ಲಿ ಊಟ, ಉಪಹಾರ ವ್ಯವಸ್ಥೆ ಕೂಡ ನೀಡಲಾಗುತ್ತದೆ ಎಂದು ಅವರು ಹೇಳಿದರು. ಅದೇ ರೀತಿಯಾಗಿ ಅಂತರಾಷ್ಟ್ರೀಯ ಪ್ರವಾಸವು ಸೆ.11ರಿಂದ ಅಕ್ಟೋಬರ್ 16ರ ವರೆಗೆ ಚೀನಾ, ಭೂತಾನ, ಅಂಡಮಾನ ಪ್ರವಾಸಗಳನ್ನು ಸಾರ್ವಜನಿಕರಿಗಾಗಿಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಹೆಚ್ಚಿನ ಮಾಹಿತಿಗಾಗಿ ದೂ.9741421088, 0821-2426001, 9741421486 ಗೆ ಸಂಪರ್ಕಿಸಬಹುದು.ಈ ಸಂದರ್ಭದಲ್ಲಿ ಮಂಜುನಾಥ, ನವೀನ ವರ್ಮಸೇರಿದಂತೆ ಇತರರು ಇದ್ದರು.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *