ಬೆಳಗಾವಿ: ನಗರ ಮಹಾನಗರ ಪಾಲಿಕೆ ಮತ್ತು ಕೆಯುಐಡಿಎಫ್‌ಸಿ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ನಿರಂತರ ನೀರು ಸರಬರಾಜು ಯೋಜನೆಯ ಪ್ರಗತಿಯನ್ನು ವಿಶ್ವಬ್ಯಾಂಕ್ ತಂಡದ ಹಿರಿಯ ಸಾಮಾಜಿಕ ಅಭಿವೃದ್ಧಿ ಪರಿಣಿತರಾದ ಆರ್. ಆರ್. ಮೋಹನ್‌ರವರು ಬೆಳಗಾವಿ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶಿಲಿಸಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದರು.
ಮುತ್ಯಾನಟ್ಟಿಯಲ್ಲಿ ಪಾಲಿಕೆಯಿಂದ ನೀರು ಸರಬರಾಜು ವ್ಯತ್ಯಯವಾಗಿದ್ದರಿಂದ ಅದರ ಬದಲಾಗಿ ಇಂಡಾಲ್ ಕಂಪನಿಯು ತನ್ನ ಸಾಮಾಜಿಕ ಜವಾಬ್ದಾರಿಯಿಂದ ಸರಬರಾಜು ಮಾಡುತ್ತಿದೆ. ಹೊಸ ಪೈಪ್ ಲೈನ್ ಅಳವಡಿಸಿ 24X7 ನಳ ಸಂಪರ್ಕ ನೀಡುತ್ತಿದೆ. ಇದೇ ಸಂದರ್ಭದಲ್ಲಿ ಮಹಾಂತೇಶ ನಗರ ಸೆಕ್ಟರ ನಂ.11 ಕ್ಕೆ ಭೇಟಿ ನೀಡಿ ನೀರು ಸಬರಾಜಿನಲ್ಲಾದ ಸುಧಾರಣೆ ಹಾಗೂ ಬಲ್ಕ ಎಸ್ ಎಂ ಎಸ್ ತಲುಪುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು. ತದನಂತರ ಕಣಬರ್ಗಿ ನಗರಕ್ಕೆ ಭೇಟಿ ನೀಡಿ ಹೊಸದಾಗಿ ಯೋಜನೆಯಿಂದ ಕಲ್ಪಿಸುತ್ತಿರುವ 24X7 ನಳ ಸಂಪರ್ಕ ಪ್ರಕ್ರಿಯೆಯನ್ನು ಪರಿಶೀಲಿಸಿ ಸಾರ್ವಜನಿಕರೊಂದಿಗೆ ಚರ್ಚಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

