Breaking News

ಲಂಡನ್‌ನ ಬಸವೇಶ್ವರ ಸ್ಮಾರಕಕ್ಕೆ ನಮನ ಸಲ್ಲಿಸಿದ ಸಂಸದ ಬಸವರಾಜ ಬೊಮ್ಮಾಯಿ

ಲಂಡನ್​: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಲಂಡನ್‌ನಲ್ಲಿ ಬಸವೇಶ್ವರನ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಲಂಡನ್‌ನ ಮಾಜಿ ಉಪಮೇಯರ್ ರಾಜೇಶ್ ಅಗರ್ವಾಲ್ ಸಂಸದ ಬಸವರಾಜ್​ ಬೊಮ್ಮಾಯಿಗೆ ಸಾಥ್​ ನೀಡಿದರು.
ಈ ಕಾರ್ಯಕ್ರಮವನ್ನು ಲಂಬೆತ್ ಬಸವೇಶ್ವರ ಫೌಂಡೇಶನ್ ಹಾಗೂ ಯುನೈಟೆಡ್ ಕಿಂಗ್ಡಮ್‌ನ ಬಸವ ಸಮಿತಿಯು ಜಂಟಿಯಾಗಿ ಆಯೋಜಿಸಿತ್ತು. ಕನ್ನಡ ಬಳಗ, ಕನ್ನಡಿಗರು ಯುಕೆ ಮತ್ತು ಭಾರತೀಯ ವಿದ್ಯಾ ಭವನದ ಗಣ್ಯರು ಭಾಗವಹಿಸಿದರು.
ಲ್ಯಾಂಬೆತ್ ಮಾಜಿ ಮೇಯರ್ ಡಾ. ನೀರಾಜ್ ಪಾಟೀಲ್, ಬಸವ ಸಮಿತಿಯ ಅಧಿಕಾರಿಗಳಾದ ಶ್ರೀ ಅಭಿಜಿತ್ ಸಾಲಿಯಂಥ್ ಮತ್ತು ಶ್ರೀ ರಂಗನಾಥ ಮಿರ್ಜಿ ಅವರು ಬ್ರಿಟಿಷ್ ಭಾರತೀಯ ಮತ್ತು ಕನ್ನಡ ಸಮುದಾಯವನ್ನು ಪ್ರತಿನಿಧಿಸುತ್ತಾ ಸಮಾರಂಭದ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *