Breaking News

ಬ್ಯಾಂಕಗಳಿಂದ ರೂ.10 ಲಕ್ಷ ವರೆಗೆ ಬೆಳೆ ಸಾಲ ನೀಡಲು ಅವಕಾಶವಿದೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಧಾರವಾಡ : ಈಗ ರೈತರು ಸಂಕಷ್ಟದಲ್ಲಿದ್ದೂ ಅನಗತ್ಯವಾಗಿ ಕೆಲವು ಬ್ಯಾಂಕ್ ಗಳು ಬೆಳೆಸಾಲ ನೀಡಲು ರೈತರಿಗೆ ಸಿಬಿಲ್ ರೇಟ್ ಕಡ್ಡಾಯ ಮಾಡುತ್ತಿವೆ. ಇದರಿಂದ ರೈತರಿಗೆ ಮತ್ತು ರೈತರು ಉತ್ಪಾದಿಸುವ ಆಹಾರದ ಮೇಲೆ ನೇರ ಪ್ರಭಾವ ಬೀರುತ್ತದೆ. ಬ್ಯಾಂಕರ್ಸ್ ಗಳು ಅನ್ವಯವಾಗದ ಕಾಯ್ದೆ, ನಿಯಮಗಳನ್ನು ಹೇಳಿ ರೈತರಿಗೆ ಬೆಳೆ ಸಾಲ ನೀಡುವಲ್ಲಿ ವಿನಾಕಾರಣ ತೊಂದರೆ ಕೊಡಬಾರದು. ಯಾವುದೇ ತಕರಾರು ಇಲ್ಲದೆ ರೈತರಿಗೆ ರೂ.10 ಲಕ್ಷ ವರೆಗೆ ಬೆಳೆಸಾಲ ನೀಡಲು ಆರ್.ಬಿ.ಐ ಮಾರ್ಗಸೂಚಿಗಳಿವೆ. ಇದನ್ನು ಬ್ಯಾಕರ್ಸ್ ಗಳು ಪಾಲನೆ ಮಾಡಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ ಜೋಶಿ ಅವರು ಹೇಳಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮತಿ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಕೇಂದ್ರ ಸರಕಾರದಿಂದ ಸಮುದಾಯ ಮತ್ತು ವ್ಯಕ್ತಿಗತ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು. ಕೇಂದ್ರ ಸರಕಾರ ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡುತ್ತಿದೆ. ಬ್ಯಾಂಕಗಳು ನಿಗದಿತ ಗುರಿಗೆ ಅನುಗುಣವಾಗಿ ಸಾಲ ಬಿಡುಗಡೆ ಮಾಡಬೇಕು. ಕಾಲಮಿತಿಯಲ್ಲಿ ಪ್ರಗತಿ ಸಾಧಿಸಬೇಕೆಂದು ಸಚಿವರು ತಿಳಿಸಿದರು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ ಎನ್.ಜಿ. ಅವರು ಮಾತನಾಡಿ, ಕೃಷಿ ಬೆಳೆ ಸಾಲವು ಜೂನ್ 2024 ರ ಅಂತ್ಯಕ್ಕೆ 610.8 ಕೋಟಿ ರೂ. ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024 ರ ಅಂತ್ಯಕ್ಕೆ 650.34 ಕೋಟಿ ರೂ.ಗಳಷ್ಟು ಸಾಧನೆಯಾಗಿದೆ. ಮತ್ತು ಶೇ.106.47 ರಷ್ಟು ತ್ರೈಮಾಸಿಕ ಗುರಿಯ ಶೇಕಡಾವಾರು ಸಾಧನೆಯಾಗಿದೆ.

ಕೃಷಿ ಅವಧಿ ಸಾಲವು ಜೂನ್ 2024 ರ ಅಂತ್ಯಕ್ಕೆ 615.66 ಕೋಟಿ ರೂ.ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024 ರ ಅಂತ್ಯಕ್ಕೆ 641.57 ಕೋ.ರೂಗಳಷ್ಟು ಸಾಧನೆಯಾಗಿದೆ. ಶೇ. 104.18 ರಷ್ಟು ತ್ರೈಮಾಸಿಕ ಗುರಿಗೆ ಸಾಧನೆಯಾಗಿದೆ.

ಸೂಕ್ಷ್ಮ , ಸಣ್ಣ, ಹಾಗೂ ಮಧ್ಯಮ ಉದ್ಯಮಗಳು ಜೂನ್ 2024 ರ ಅಂತ್ಯಕ್ಕೆ 2357.81 ಕೋ.ರೂ.ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024 ರ ಅಂತ್ಯಕ್ಕೆ 3312.98 ಕೋ.ರೂ.ಗಳಷ್ಟು ಸಾಧನೆಯಾಗಿದೆ. ಶೇ.140.51 ರಷ್ಟು ತ್ರೈಮಾಸಿಕ ಗುರಿಗೆ ಶೇಕಡಾವಾರು ಸಾಧನೆಯಾಗಿದೆ.

ಇತರೆ ಆಧ್ಯತಾ ವಲಯದಲ್ಲಿ ಜೂನ್ 2024 ರ ಅಂತ್ಯಕ್ಕೆ 180.23 ಕೋಟಿ.ರೂ.ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024 ರ ಅಂತ್ಯಕ್ಕೆ 147.8 ಕೋಟಿ.ರೂ. ಗಳಷ್ಟು ಸಾಧನೆಯಾಗಿದೆ. ಮತ್ತು ಶೇ 82.01 ರಷ್ಟು ತ್ರೈಮಾಸಿಕ ಗುರಿಗೆ ಶೇಕಡಾವಾರು ಸಾಧನೆಯಾಗಿದೆ.

ಆಧ್ಯತಾ ರಹಿತಾ ವಲಯದಲ್ಲಿ ಜೂನ್ 2024 ರ ಅಂತ್ಯಕ್ಕೆ 1828.76 ಕೋಟಿ ರೂ.ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024 ರ ಅಂತ್ಯಕ್ಕೆ 2701.13 ಕೋಟಿ ರೂ.ಗಳಷ್ಟು ಸಾಧನೆಯಾಗಿದೆ. ಶೇ.147.7 ರಷ್ಟು ತ್ರೈಮಾಸಿಕ ಗುರಿಯ ಶೇಕಡಾವಾರು ಸಾಧನೆಯಾಗಿದೆ.

ಒಟ್ಟಾರೆಯಾಗಿ ಜೂನ್ 2024 ರ ಅಂತ್ಯಕ್ಕೆ 5593.26 ಕೋಟಿ ರೂ.ಗಳ ಗುರಿಯನ್ನು ಹೊಂದಿದ್ದು, 2024 ರ ಅಂತ್ಯಕ್ಕೆ 7453.82 ಕೋಟಿ ರೂ.ಗಳಷ್ಟು ಸಾಧನೆಯಾಗಿದೆ.133.26 ತ್ರೈಮಾಸಿಕ ಗುರಿಯ ಶೇಕಡಾವಾರು ಸಾಧನೆಯಾಗಿದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು, ಆರ್.ಬಿ.ಐ ಜಿಲ್ಲಾ ಅಗ್ರಣೀಯ ಅಧಿಕಾರಿ ಅರುಣಕುಮಾರ, ಬ್ಯಾಂಕ್ ಆಪ್ ಬರೋಡಾ ದ ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕ ವಿಜಯ ಪಾಟೀಲ, ನಬಾರ್ಡ್ ಎಜಿಎಮ್ ಮಯೂರ ಕಾಂಬ್ಳೆ ಅವರು ಮಾತನಾಡಿದರು.
ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ ಪ್ರಭುದೇವ ಎನ್.ಜಿ. ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.

ಸಭೆಯಲ್ಲಿ ವಿವಿಧ ಬ್ಯಾಂಕ್ ಗಳ ಪ್ರಾದೇಶಿಕ ವ್ಯವಸ್ಥಾಪಕರು, ಶಾಖಾ ವ್ಯವಸ್ಥಾಪಕರು, ರೈತ ಪ್ರತಿನಿಧಿಗಳು,ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *