ನವದೆಹಲಿ: ಚೀನಾಕ್ಕೆ ಭಾರತದ ರಫ್ತುಗಳು ಶೇ. 22.44ರಷ್ಟು ಕುಸಿದಿದ್ದು, ಒಂದು ಬಿಲಿಯನ್ ಡಾಲರ್‌ಗೆ ತಲುಪಿದೆ. ಆದರೆ ಆಮದುಗಳು ಆಗಸ್ಟ್‌ನಲ್ಲಿ ಶೇ. 15.55 ಏರಿಕೆಯಾಗಿದ್ದು, 10.8 ಶತಕೋಟಿ ಡಾಲರ್‌ಗೆ ಏರಿದೆ.
ಈ ಬಗ್ಗೆ ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳ ಈ ಮಾಹಿತಿ ನೀಡಿದೆ. ಏಪ್ರಿಲ್ ಆಗಸ್ಟ್ ಅವಧಿಯಲ್ಲಿ ಚೀನಾ ಹಾಗೂ ಭಾರತದ ನಡುವಿನ ವ್ಯಾಪಾರ ಕೊರತೆಯು 35.85 ಶತಕೋಟಿ ಡಾಲರ್‌ಗೆ ವಿಸ್ತರಿಸಿದೆ.
ಹಾಗೆಯೇ ಅಮೆರಿಕ, ಯುಎಇ, ಸಿಂಗಾಪುರ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಫ್ರಾನ್ಸ್ ಮತ್ತು ಟರ್ಕಿ ದೇಶಗಳಿಗೆ ಭಾರತದ ರಫ್ತು ಕೂಡ ಆಗಸ್ಟ್‌ನಲ್ಲಿ ಕುಸಿದಿದೆ. ಅಂಕಿಅಂಶಗಳ ಪ್ರಕಾರ, ಯುಎಸ್‌ಗೆ ಭಾರತದ ರಫ್ತುಗಳು ಶೇಕಡಾ 6.29 ರಷ್ಟು ಕುಸಿದು 6.55 ಶತಕೋಟಿ ಡಾಲರ್‌ಗೆ ತಲುಪಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

