Breaking News

ಕಿತ್ತೂರು ಉತ್ಸವದಲ್ಲಿ ಮಹಿಳಾ ಕಲಿಗಳ ಕಾದಾಟ

ಬೆಳಗಾವಿ: ಮ್ಯಾಟ್‌ ಕುಸ್ತಿಯೇ ಜನಪ್ರಿಯವಾಗುತ್ತಿರುವ ಈ ಕಾಲಘಟ್ಟದಲ್ಲೂ, ಸಾಂಪ್ರದಾಯಿಕವಾಗಿ ಮಣ್ಣಿನ ಕಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ಕುಸ್ತಿ ಪಂದ್ಯಾವಳಿ ಆಯೋಜನೆಗೆ ತಯಾರಿ ನಡೆದಿದೆ. ಈ ಬಾರಿ ಕಿತ್ತೂರು ಉತ್ಸವದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ವಿದೇಶದ ಮಹಿಳಾ ಕಲಿಗಳು ಕಾದಾಟ ನಡೆಸಲಿದ್ದಾರೆ.
ಪ್ರತಿವರ್ಷ ಅಕ್ಟೋಬರ್‌ 23 ರಿಂದ 25 ರವರೆಗೆ ಕಿತ್ತೂರು ಉತ್ಸವ ವೈಭವದಿಂದ ನೆರವೇರುತ್ತದೆ, ಕೊನೆಯ ದಿನದಂದು ರಾಷ್ಟ್ರಮಟ್ಟದ ಪುರುಷರು ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ ನಡೆಯುತ್ತಿತ್ತು. ಕಳೆದ ವರ್ಷ ಮೊದಲ ಬಾರಿ ನಡೆದಿದ್ದ ಅಂತರರಾಷ್ಟ್ರೀಯ ಪುರುಷರ ಕುಸ್ತಿ ಪಂದ್ಯಾವಳಿಯಲ್ಲಿ ವಿದೇಶದ ಇಬ್ಬರು ಜಟ್ಟಿಗಳು ಭಾಗವಹಿಸಿ, ಗಮನ ಸೆಳೆದಿದ್ದರು. ರಾಷ್ಟ್ರಮಟ್ಟದ ಮಹಿಳೆಯರ ಕುಸ್ತಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಹರಿಯಾಣದ ಜಟ್ಟಿಗಳು ಭಾಗವಹಿಸಿದ್ದರು. ಈ ಬಾರಿ ಕಿತ್ತೂರು ಉತ್ಸವ ದ್ವಿಶತಮಾನೋತ್ಸವದ ಸಂಭ್ರಮದಲ್ಲಿದೆ ಇದರ ಸವಿನೆನಪಿಗಾಗಿ ಇದೇ ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ಕುಸ್ತಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಉತ್ಸವದ ದ್ವಿಶತಮಾನೋತ್ಸವದ ಕಾರಣಕ್ಕೆ ಈ ಬಾರಿ ಹೆಚ್ಚಿನ ಕುಸ್ತಿಪಟುಗಳನ್ನು ಕಿತ್ತೂರಿನತ್ತ ಸೆಳೆಯಲಿದ್ದೇವೆ. ಅಂತರರಾಷ್ಟ್ರೀಯ ಮಟ್ಟದ ಪುರುಷರ ವಿಭಾಗದಲ್ಲಿ ಕನಿಷ್ಠ 3 ಜೋಡಿ, ಮಹಿಳೆಯರ ವಿಭಾಗದಲ್ಲಿ ಕನಿಷ್ಠ 2 ಜೋಡಿ ಆಹ್ವಾನಿಸಲು ಪ್ರಯತ್ನಿಸುತ್ತಿದ್ದೇವೆ. ವಿವಿಧ ಕುಸ್ತಿಪಟುಗಳನ್ನು ಸಂಪರ್ಕಿಸಿ, ಅವರ ತೂಕ, ಎಲ್ಲೆಲ್ಲಿ ಪಂದ್ಯಾವಳಿಯಲ್ಲಿ ಆಡಿದ್ದಾರೆ, ಮಾಡಿದ ಸಾಧನೆ ಮತ್ತಿತರ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಭಾರತೀಯ ಶೈಲಿ ಕುಸ್ತಿ ಸಂಘದ ಅಧ್ಯಕ್ಷ ರತನಕುಮಾರ್‌ ಮಠಪತಿ ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಬಿ.ಶ್ರೀನಿವಾಸ ಈ ಬಾರಿ ಕುಸ್ತಿ ಪಂದ್ಯಾವಳಿಯಲ್ಲಿ ಅಂತರರಾಷ್ಟ್ರೀಯ ಪಟುಗಳನ್ನು ಆಹ್ವಾನಿಸುವ ಜತೆಗೆ ಸ್ಥಳೀಯ ಕುಸ್ತಿಪಟುಗಳಿಗೂ ಆದ್ಯತೆ ಕೊಡುತ್ತೇವೆ. ಕಳೆದ ಬಾರಿಯ ಉತ್ಸವದಲ್ಲಿ ಕುಸ್ತಿ, ವಾಲಿಬಾಲ್‌, ಕಬಡ್ಡಿ, ಸೈಕ್ಲಿಂಗ್‌, ಜಲಕ್ರೀಡೆ ಮೊದಲಾದ ಕ್ರೀಡೆಗಳ ಆಯೋಜನೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸರ್ಕಾರ ₹15 ಲಕ್ಷ ಅನುದಾನ ಕೊಟ್ಟಿತ್ತು. ಈ ಬಾರಿ ₹50 ಲಕ್ಷ ಅನುದಾನ ಕೊಟ್ಟರೆ, ವಿವಿಧ ಕ್ರೀಡೆಗಳನ್ನು ವ್ಯವಸ್ಥಿತವಾಗಿ ಆಯೋಜಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *