Breaking News

ಪಾದಯಾತ್ರೆ ಮೂಲಕ ಮಹದಾಯಿ ಹೋರಾಟಕ್ಕೆ ಮುನ್ನಡೆ

ಹುಬ್ಬಳ್ಳಿ : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾ‌ರ್ ಶೆಟ್ಟಿ ಬಣದಿಂದ ರಾಜ್ಯ ಸಮಿತಿ ಹಾಗೂ ಉತ್ತರ ಕರ್ನಾಟಕ ಹಾಗೂ ಬೆಳಗಾವಿ ವಿಭಾಗದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕಳಸಾ ಬಂಡೂರಿ ಮಹದಾಯಿ ನಾಲೆಜೋಡಣೆ ಹಾಗೂ ಕಪ್ಪತ್ತಗುಡ್ಡ ಪ್ರಾಧಿಕಾರ ರಚಿಸುವಂತೆ ಪಾದಯಾತ್ರೆ ಮೂಲಕ ಹೋರಾಟಕ್ಕೆ ಮುಂದಾಗಿದ್ದಾರೆ.

ನರಗುಂದದಿಂದ ಗದಗವರಗೆ ಎರಡು ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿದ್ದು, ಹುಬ್ಬಳ್ಳಿಯ ಹೃದಯ ಭಾಗ ಚೆನ್ನಮ್ಮ ವೃತ್ತದಿಂದ ಚಾಲನೆ ನೀಡಲಾಗಿದೆ. ಹೋರಾಟಕ್ಕೆ ಧಾರವಾಡ, ಗದಗ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಯಿಂದ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಜೀವ ಜಲಕ್ಕೆ ಅನ್ನದಾತನ ಅಭ್ಯುದಯಕ್ಕೆ ಹೋರಾಟ ಎಂಬುವ ಘೋಷ ವಾಕ್ಯದಲ್ಲಿ ಮಹದಾಯಿ ಹೋರಾಟದ ಕಿಚ್ಚನ್ನು ಹೊತ್ತಿಸಿದ್ದಾರೆ.

ಇನ್ನೂ ನರಗುಂದದಿಂದ ಎರಡು ದಿನಗಳ ಪಾದಯಾತ್ರೆ ಆರಂಭಿಸಿ ರಾಜ್ಯದ ವಿವಿಧ ಗ್ರಾಮಗಳಲ್ಲಿ ಹೋರಾಟದ ಜಾಗೃತಿ ಮೂಡಿಸಲು ಮುಂದಾಗಿದೆ. ಮಹದಾಯಿ ಹಾಗೂ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಜನರ ಸಮಸ್ಯೆಗೆ ಧ್ವನಿಯಾಗಬೇಕಿದೆ.

Share News

About Shaikh BigTv

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *