ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಎರಡು ಮೂರು ವಾರಗಳಿಂದ ಮಳೆ ಬಾರದೇ ಇರುವುದರಿಂದ ಬಿತ್ತನೆ ಮಾಡಿರುವ ಬೆಳೆಗಳು ತೇವಾಂಶದ ಕೊರತೆಯಿಂದ ರಾಗಿ ಪೈರು ಭೂಮಿಯಲ್ಲಿ ಒಣಗುತ್ತಿರುವುದು ಒಂದು ಕಡೆಯಾದರೆ ಬಿತ್ತನೆ ಮಾಡಬೇಕಾಗಿರುವ ರೈತರು ಮಳೆರಾಯನಿಗಾಗಿ ಕಾಯ್ದು ಕುಳಿತಿದ್ದು ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡುವಂತೆ ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ರಾಗಿ ಪ್ರಮುಖ ಬೆಳೆಯಾಗಿದೆ. ಕಳೆದ ಎರಡು ಮೂರು ವಾರಗಳಿಂದ ಮಳೆ ಬರದೇ ಇರುವುದರಿಂದ ರೈತರು ಸಾಕಷ್ಟು ಕಂಗಲಾಗುವಂತೆ ಮಾಡಿದೆ. ಕಳೆದ ಬಾರಿಯೂ ಸಹ ಮಳೆ ಇಲ್ಲದೇ ಬರಗಾಲದ ಪರಿಸ್ಥಿತಿಯನ್ನು ರೈತರು ಎದುರಿಸಿದ್ದರು.
ಜಿಲ್ಲೆಯಲ್ಲಿ ಪ್ರಾರಂಭದಲ್ಲಿ ಮುಂಗಾರು ಮಳೆ ರೈತರಿಗೆ ಆಶಾಭಾವನೆ ಮೂಡಿಸಿತ್ತು. ಬಿತ್ತನೆ ಸಂದರ್ಭದಲ್ಲಿ ಕೈ ಕೊಟ್ಟಿತ್ತು.ಆ ಬಳಿಕ ಮಳೆ ಬಂದಿದ್ದರಿಂದ ಜಿಲ್ಲೆಯಲ್ಲಿ ಶೇಕಡ 105 ರಷ್ಟು ಬಿತ್ತನೆ ಕಾರ್ಯ ನಡೆದಿದೆ. ಹಳೆಯ ಕೊರತೆಯಿಂದಾಗಿ ಬೆಳೆಗಳು ಒಣಗುತ್ತಿದೆ. ರಾಗಿಯನ್ನು ಬಿತ್ತನೆ ಮಾಡಿರುವುದು ಒಂದು ಕಡೆಯಾದರೆ ಸಾಲ ಮಾಡಿ ಕೊಂಡು ಬೀಜ ಗೊಬ್ಬರ ಉಳುಮೆಗಾಗಿ ಹಣ ಹೊಂದಿಸಿಕೊಂಡು ರಾಗಿ ಬಿತ್ತನೆ ಮಾಡಲು ಕಾಯುತ್ತಿರುವ ರೈತರಲ್ಲಿ ಸಕಾಲಕ್ಕೆ ಮಳೆ ಬಾರದಿದ್ದರೆ ಬಿತ್ತನೆ ಮಾಡಲು ಆಗುತ್ತದೆಯೋ ಇಲ್ಲವೋ ಎಂಬ ಭಯದಲ್ಲಿ ಮಳೆಗಾಗಿ ಕಾಯುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

