Breaking News

ಅಂತಾರಾಷ್ಟ್ರೀಯ ಪಂದ್ಯವನ್ನೇ ಆಡದ ಯುವ ಆಟಗಾರರು ಕೋಟ ಕೋಟ್ಯಧಿಪತಿಗಳಾದರು….

ಐಪಿಎಲ್ 2024ರ ಮಿನಿ ಹರಾಜಿನಲ್ಲಿ ಹಲವು ಆಟಗಾರರ ಅದೃಷ್ಟ ಖುಲಾಯಿಸಿದೆ. ಆಸ್ಟ್ರೇಲಿಯಾ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಪಾಯಿ ಪಡೆದರೆ, ಪ್ಯಾಟ್ ಕಮ್ಮಿನ್ಸ್ 20.50 ಕೋಟಿ ಪಡೆದ ಹೊಸ ದಾಖಲೆ ಬರೆದರು. ಇದರ ಜೊತೆಗೆ ಇನ್ನೂ ಅಂತಾರಾಷ್ಟ್ರೀಯ ಪಂದ್ಯವನ್ನೇ ಆಡದ ಯುವ ಆಟಗಾರರು ಕೋಟ ಕೋಟ್ಯಧಿಪತಿಗಳಾದರು. ಉತ್ತರ ಪ್ರದೇಶದ ಬ್ಯಾಟರ್ ಸಮೀರ್ ರಿಜ್ವಿ ಅವರನ್ನು 8.40 ಕೋಟಿ ರೂಪಾಯಿ ನೀಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿ ಮಾಡಿತು. ಇನ್ನು ವೇಗದ ಬೌಲರ್ ಯಶ್ ದಯಾಳ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) 5 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತು. ಕುಮಾರ್ ಕುಶಾಗ್ರ ಎನ್ನುವ ವಿಕೆಟ್ ಕೀಪರ್ ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಹಲವು ಫ್ರಾಂಚೈಸಿಗಳು ಭಾರಿ ಪೈಪೋಟಿ ನಡೆಸಿದವು.

Share News

About BigTv News

Check Also

ರಮ್ಯಾ ಹೊಸಯುಗ ಪ್ರಾರಂಭ: ಸ್ಯಾಂಡಲ್ ವುಡ್ಗೆ ಕಾಲಿಡಲು ಮತ್ತೆ ಮನಸು ಮಾಡಿದ ರಮ್ಯಾ.

ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಸ್ಯಾಂಡಲ್​ವುಡ್​ನ ಸೂಪರ್ ಡೂಪರ್ ಹಿಟ್ ಜೋಡಿಗಳಲ್ಲಿ ಒಂದು. ರಮ್ಯಾಗೆ ಮುಂಗಾರು ಮಳೆ ಡೈರೆಕ್ಟರ್​ …

Leave a Reply

Your email address will not be published. Required fields are marked *