ನವದೆಹಲಿ: ಸೌರ ವಿದ್ಯುತ್ ಬಳಕೆ ಉತ್ತೇಜಿಸುವ ಮೂಲಕ ಉಚಿತ ವಿದ್ಯುತ್ ಹಾಗೂ ಆದಾಯ ಮೂಲ ನೀಡುವ ಮಹತ್ವಾಕಾಂಕ್ಷಿ ಪ್ರಧಾನಿ ಸೂರ್ಯ ಘರ್ ಯೋಜನೆ ಬಂದಂತಹ ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತ್ ಮೂಲಕ ಬರೋಬ್ಬರಿ 1 ಕೋಟಿ ಮನೆಗೆ ಸೌಲಭ್ಯ ಒದಗಿಸುವ ಈ ಯೋಜನೆ ಲಾಭವನ್ನು ಸುಲಭವಾಗಿ ಪಡೆಯಲು ಸಾಧ್ಯವಿದೆ. ಮನೆಯ ಮೇಲೆ ಸೌರಫಲಕ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಹಾಗೂ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಅದರಿಂದಲೂ ಆದಾಯಗಳಿಸುವ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಭರ್ಜರಿ ಸಬ್ಸಿಡಿಯನ್ನು ನೀಡುತ್ತಿದೆ.
ಈಗಾಗಲೇ 1.3 ಕೋಟಿ ಮಂದಿ ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ, ಮನೆಯ ಮೇಲ್ಛಾವಣಿಯಲ್ಲಿ ಸೌರಫಲಕ ಅಳವಡಿಸಿ ಇದರಿಂದ ಮನೆಗೆ ಬೇಕಾಗುವ ವಿದ್ಯುತ್ ಪಡೆಯಲು ಹಾಗೂ ಹೆಚ್ಚುವರಿ ವಿದ್ಯುತ್‌ನ್ನು ಮಾರಾಟ ಮಾಡಲು ಈ ಯೋಜನೆ ಅನುವು ಮಾಡಿಕೊಡುತ್ತದೆ. ಉಚಿತ ವಿದ್ಯುತ್ ಹಾಗೂ ಆದಾಯ ಎರಡನ್ನೂ ಈ ಯೋಜನೆ ಮೂಲಕ ಪಡೆಯಲು ಸಾಧ್ಯವಿದೆ. ಸೌರಫಲಕ ಅಳವಡಿಕೆ ಸೇರಿದಂತೆ ಇದಕ್ಕೆ ಪೂರಕ ವಿದ್ಯುತ್ ವ್ಯವಸ್ಥೆಗಳಿಗೆ ಹೆಚ್ಚಿನ ಖರ್ಚುಗಳಿಲ್ಲ. 1 ಕಿಲೋವ್ಯಾಟ್ ಅಳವಡಿಕೆ ವೆಚ್ಚ ಸರಿಸುಮಾರು 90,000 ರೂಪಾಯಿ, ಇನ್ನು 2 ಕಿಲೋವ್ಯಾಟ್‌ಗೆ 1.5 ಲಕ್ಷ ರೂಪಾಯಿ ಹಾಗೂ 3 ಕಿಲೋವ್ಯಾಟ್‌ಗೆ 2 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

