ಧಾರವಾಡ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಸೈನಿಕ ಕಲ್ಯಾಣ ಸಮಿತಿ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ದಿ. ಕೃಷ್ಣ ಜೋಶಿ ಅವರ ಎರಡನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜರುಗಿತು.ದಿ. ಕೃಷ್ಣ ಜೋಶಿ ಅವರ ಶಿಷ್ಯರು ಆದ ಡಾ. ಶಿವಪ್ರಸಾದ್ ಅವರು ಕೃಷ್ಣಾ ಜೋಶಿ ಅವರು ವಿದ್ಯಾರ್ಥಿಗಳೊಂದಿಗೆ ಹೊಂದಿರುವ ಸಂಪರ್ಕ ಮತ್ತು ಪ್ರೋತ್ಸಾಹ ಕೊಡುವ ಬೆಂಬಲಿಸುವ ವ್ಯಕ್ತಿತ್ವವನ್ನು ಸ್ಮರಿಸಿದರು. ಮಲ್ಲಿಕಾರ್ಜುನ ಚಿಕ್ಕಮಠ ಅವರು ತಮ್ಮ ಸಹೋದ್ಯೋಗಿ ಆಗಿದ್ದ ಕೃಷ್ಣ ಜೋಶಿ ಅವರ ಸಮಾಜದ ಅತೀ ಸಾಮಾನ್ಯ ಜನರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸುವ ವಿಶಾಲ ಹೃದಯ ಗಳಾಗಿದ್ದರು ಎಂದು ನೆನಪಿಸಿಕೊಂಡರು. ಹಿರಿಯ ಸಾಹಿತಿಗಳು ಆದ ಎಚ್ ವಿ ಕಾಖಂಡಕಿ ಅವರು ದಿ.ಕೃಷ್ಣ ಜೋಶಿ ಅವರ ಕಾರ್ಯ ವೈಖರಿ ಮತ್ತು ಸಂಘಟನಾ ಕೌಶಲ್ಯವನ್ನು ಪ್ರಶಂಸಿ ಮಾತನಾಡಿದರು. ಎಚ್ ಬಿ ಗುತ್ತಲ ಅವರು ಸಾರ್ವಜನಿಕ ತೊಂದರೆಗಳನ್ನು ಮತ್ತು ಸಮಸ್ಯೆಗಳನ್ನು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರುವದಲಲದೇ, ಪರಿಹಾರ ಸಿಕ್ಕ ಕೂಡಲೇ ಕೃತಜ್ಞತೆಯನ್ನು ಸಲ್ಲಿಸುವ ಪರಿಪಾಠ ವನ್ನು ದಿ. ಕೃಷ್ಣ ಜೋಶಿ ಹೊಂದಿದ್ದಾರೆಂದು ತಿಳಿಸಿದರ

ಕರ್ನಾಟಕ ಸೈನಿಕ ಕಲ್ಯಾಣ ಸಮಿತಿ ಅಧ್ಯಕ್ಷ ಶ್ರೀ ಚಂದ್ರಶೇಖರ ಅಮೀನಗಡ ಅವರು ದಿ. ಕೃಷ್ಣ ಜೋಶಿ ಅವರು ಸೈನಿಕರ ಬಗ್ಗೆ ಹೊಂದಿದ್ದ ಕಾಳಜಿ ಮತ್ತು ಯುದ್ಧದಲ್ಲಿ ಮಡಿದ ಯೋಧರ ಶವ ಸಂಸ್ಕಾರದಲ್ಲಿ ಭಾಗವಹಿಸುವ ಮತ್ತು ಯೋಧರ ಕುಟುಂಬಕ್ಕೆ ಸಾಂತ್ವನ ಹೇಳುವ ಹಾಗೂ ಸರಕಾರದಿಂದ ಸಿಗುವ ಮಾಹಿತಿ ಒದಗಿಸುವ ಕೆಲಸ ಜೊತೆಯಾಗಿ ಮಾಡುತ್ತಿದ್ದ ಬಗ್ಗೆ ಸ್ಮರಿಸುತ್ತಾ ಕಾರ್ಗಿಲ್ ಸ್ತೂಪ ಸ್ಥಾಪನೆಯನ್ನು ಸ್ಮರಿಸಿದರು. ಡಾ. ಟಿ ಜಿ ಪಾಟೀಲ, ಶ್ರೀ ವೀರಪ್ಪ ಅಮ್ಮಿನಗಡ, ಅನಂತ ಥೀಟೆ, ಕೆ ಎಚ್ ನಾಯಕ ಮುಂತಾದವರು ಸ್ಮರಣೆ ಮಾಡಿ ತಮ್ಮ ನುಡಿ ನಮನ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಲಿಂಗರಾಜ ಅಂಗಡಿ ಅವರು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಾಗಿ ಸ್ಮರಣೀಯ ಸೇವೆ ಸಲ್ಲಿಸಿದ ಕುರಿತು ನೆನಪಿಸಿಕೊಂಡರು. ಪ್ರೊ. ಕೆ ಎಸ್ ಕೌಜಲಗಿ ಸ್ವಾಗತಿಸಿ ನಿರೂಪಿಸಿದರು. ಮಹಾಂತೇಶ ನರೇಗಲ್ ವಂದಿಸಿದರು. ಎಸ್ ಎಮ್ ದಾನಪ್ಪಗೌಡರ, ಎ ಬಿ ಮೇಟ, ಪಂಡಿತ ಮುಂಜಿ, ಬಿ ಎಚ್ ತಾಳಿಕೋಟಿ, ಎಚ್ ಬಿ ಖೇರ್, ಸಂಜಯ ಪಾಟೀಲ, ವಿಜಯ ಭಾಸ್ಕರ್ , ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





