Breaking News

ಬೆಂಗಳೂರಿನಲ್ಲಿ ದೇಶದ ಮೊದಲ ಬುಲೆಟ್ ಟ್ರೇನ್ ನಿರ್ಮಾಣ

ಬೆಂಗಳೂರು: ದೇಶದಲ್ಲಿ ಓಡಾಡಲಿರುವ ಮೊದಲ ಬುಲೆಟ್ ಟ್ರೈನ್ ಬೆಂಗಳೂರಿನಲ್ಲೇ ತಯಾರಾಗಲಿದೆ ಎಂದು ತಿಳಿದುಬಂದಿದೆ. ಎಂಟು ಬೋಗಿಗಳ ಎರಡು ರೈಲುಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಇಎಂಎಲ್​ ಮಾತ್ರ ಬಿಡ್ ಸಲ್ಲಿಸಿದೆ.
ಹೀಗಾಗಿ ಬುಲೆಟ್‌ ಟ್ರೇನ್‌ ತಯಾರಿಕೆಯಲ್ಲಿ ಬೆಂಗಳೂರು ಪ್ರಮುಖ ಪಾತ್ರ ವಹಿಸಲಿದೆ. ಬೆಂಗಳೂರು, ಮೈಸೂರು ಮತ್ತು ಕೆಜಿಎಫ್​ನಲ್ಲಿ ಘಟಕಗಳನ್ನು ಹೊಂದಿರುವ ಬಿಇಎಂಎಲ್‌ನ ಪರಿಪೂರ್ಣ ಘಟಕ ಬೆಂಗಳೂರು, ಬುಲೆಟ್‌ ಟ್ರೇನ್‌ ತಯಾರಿಕೆಗೆ ಅಗತ್ಯವಾದ ಮೂಲಸೌಲಭ್ಯಗಳನ್ನು ಹೊಂದಿದೆ.
ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್​) ಎರಡು ಹೈಸ್ಪೀಡ್ ಚೇರ್ ಕಾರ್ ರೈಲುಗಳನ್ನು ತಯಾರಿಸಲು 2024ರ ಸೆ.5 ರಂದು ಈ ಸಂಬಂಧ ಟೆಂಡರ್‌ ಆಹ್ವಾನಿಸಿತ್ತು. ಸೆ.19 ರಂದು ಬಿಡ್ ಸಲ್ಲಿಕೆ ಗಡುವು ಅಂತಿಮವಾಗಿದ್ದು, ಬಿಇಎಂಎಲ್​ ಮಾತ್ರ ಬಿಡ್ ಸಲ್ಲಿಸಿದೆ. ಒಂದು ವಾರದೊಳಗೆ ಟೆಂಡರ್ ಅಂತಿಮಗೊಳಿಸಲಾಗುವುದು ಎಂದು ಚೆನ್ನೈನ ಐಸಿಎಫ್ ಜನರಲ್ ಮ್ಯಾನೇಜರ್ ಯು.ಸುಬ್ಬಾರಾವ್ ತಿಳಿಸಿದ್ದಾರೆ.
ಬಿಇಎಂಎಲ್​ ಬೆಂಗಳೂರು ಘಟಕ ಅಂತಿಮ ಜೋಡಣೆ ಮತ್ತು ರೋಲ್‌ಔಟ್ ಅನ್ನು ನಿರ್ವಹಿಸುತ್ತದೆ. ಯಶಸ್ವಿ ಪ್ರಯೋಗಗಳ ನಂತರ, ದೆಹಲಿ ವಾರಣಾಸಿ, ಮುಂಬೈ ಹೈದರಾಬಾದ್, ಮತ್ತು ಬೆಂಗಳೂರು ಚೆನ್ನೈ ಮಾರ್ಗಗಳಿಗೆ ಹೈಸ್ಪೀಡ್​(ಬುಲೆಟ್​) ರೈಲುಗಳ ನಿರ್ಮಾಣಕ್ಕೆ ಬಿಇಎಂಎಲ್​ ಬೆಂಗಳೂರು ಘಟಕಕ್ಕೆ ಅವಕಾಶ ಒಲಿದು ಬರುವ ನಿರೀಕ್ಷೆ ಹೆಚ್ಚಿದೆ. ಈ ರೈಲುಗಳು ಗಂಟೆಗೆ 280 ಕಿಮೀ ವೇಗ ಹೊಂದಿರಲಿವೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *