ಹುಬ್ಬಳ್ಳಿ: ಹುಬ್ಬಳ್ಳಿಯ ಅಳಗುಂಡಿ ಓಣಿಯಲ್ಲಿರುವ ಸರ್ ಸಿದ್ದಪ್ಪ ಕಂಬಳಿ ಅವರ ಮನೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಅವರ ಮನೆಯಲ್ಲಿ ನಿರ್ಮಾಣ ಮಾಡಿದ ಮ್ಯೂಸಿಯಂ ವೀಕ್ಷಣೆ ಮಾಡಿದರು.
ಮನೆಯ ಮೂರನೇ ಮಹಡಿಯಲ್ಲಿ ಚಿಕ್ಕದಾಗಿದ್ದರೂ ಕೂಡಾ ಚೊಕ್ಕದಾಗಿರುವ ಈ ಮ್ಯೂಸಿಯಂನಲ್ಲಿ ಸರ್ ಸಿದ್ದಪ್ಪ ಕಂಬಳಿ ಅವರು ಬಳಸುತ್ತಿದ್ದ ಸಾಮಗ್ರಿಗಳನ್ನು ಸಚಿವರು ವೀಕ್ಷಣೆ ಮಾಡಿದರು.
ಮುಖ್ಯವಾಗಿ ಸರ್ ಸಿದ್ದಪ್ಪ ಕಂಬಳಿ ಅವರ ತದ್ರೂಪದಂತಿರುವ ಮೇಣದ ಪ್ರತಿಮೆಯ ಬಗ್ಗೆ ಅವರ ಕುಟುಂಬಸ್ಥರಿಂದ ಮಾಹಿತಿಯನ್ನು ಪಡೆದರು. ಅವರು ಬಳಸುತ್ತಿದ್ದ ಬಟ್ಟೆ,ಪುಸ್ತಕ,ಟೋಪಿ ಸೇರಿದಂತೆ ವಿವಿಧ ವಸ್ತುಗಳ ಕುರಿತು ಕುಟುಂಬಸ್ಥರಿಂದ ಮಾಹಿತಿಯನ್ನು ಪಡೆದು ಕುಟುಂಬದವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲ ಬಾರಿಗೆ ಸರ್ ಸಿದ್ದಪ್ಪ ಕಂಬಳಿ ಮ್ಯೂಸಿಯಂ ನೋಡಲು ಬಂದಿದ್ದ ಸಚಿವ ಈಶ್ವರ್ ಖಂಡ್ರೆಯವರನ್ನು ಸರ್ ಸಿದ್ದಪ್ಪ ಕಂಬಳಿ ಕುಟುಂಬಸ್ಥರು ಆತ್ಮೀಯವಾಗಿ ಸನ್ಮಾನವನ್ನು ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

