Breaking News

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಜಿಯೋ ಟವರ್ ಸ್ಥಾಪನೆ

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿಯೂ ರಿಲಯನ್ಸ್ ಜಿಯೋದ ನೆಟ್‌ವರ್ಕ್ ಒದಗಿಸಿಕೊಡುವುದಕ್ಕಾಗಿ ಟವರ್ ಸ್ಥಾಪಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಹೂಗ್ಯಂನಂತಹ ಗ್ರಾಮಗಳಲ್ಲಿ ಜಿಯೋ ಟವರ್ ಸ್ಥಾಪಿಸುವಲ್ಲಿ ಯಶಸ್ಸು ಕಂಡಿದೆ.
ಪರಿಸರ ಮತ್ತು ಭೌಗೋಳಿಕ ಸವಾಲುಗಳನ್ನು ಮೀರಿ ಜಿಯೋ 4ಜಿ ಮತ್ತು 5ಜಿ ನೆಟ್‌ವರ್ಕ್ ಸೇವೆಯನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಾದ್ಯಂತ ಮುನ್ನೂರಕ್ಕೂ ಹೆಚ್ಚು ತಾಲ್ಲೂಕುಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿದ್ದು, ಇದರಿಂದ ಆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಅನೇಕ ಹಳ್ಳಿಗಳು ಜಿಯೋ ನೆಟ್‌ವರ್ಕ್‌ನ ಪ್ರಯೋಜನ ಪಡೆಯುತ್ತಿವೆ.
ಶಿಕ್ಷಣ , ಆರೋಗ್ಯ, ಉದ್ಯೋಗ ಮತ್ತಿತರ ಆನ್‌ಲೈನ್ ಸೇವೆಗಳು ಗ್ರಾಮೀಣ ಪ್ರದೇಶದ ಜನರಿಗೂ ದೊರೆಯುವಲ್ಲಿ ಜಿಯೋ ಪಾತ್ರ ಪ್ರಮುಖವಾಗಿದೆ. ಜೊತೆಗೆ ಅನಿಯಮಿತ ವಾಯ್ಸ್ ಮತ್ತು ಡೇಟಾ ಪ್ರಯೋಜನಗಳು ದೊರೆಯುತ್ತಿದ್ದು, ಜಿಯೋದ ಪ್ರೀಮಿಯಂ ಅಪ್ಲಿಕೇಷನ್‌ಗಳಾದ ಜಿಯೋಟಿವಿ ಮತ್ತು ಜಿಯೋಸಿನಿಮಾದ ಮನರಂಜನೆಯನ್ನು ಸಹ ಪಡೆಯಬಹುದಾಗಿದೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *