ನವದೆಹಲಿ : ಗಂಡನ ಅಸ್ತಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಗಂಡನ ಮರಣದ ನಂತರ ಅವನ ಆಸ್ತಿಯ ಮೇಲೆ ಹೆಂಡತಿಗೆ ಸಂಪೂರ್ಣ ಹಕ್ಕಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಗಂಡನ ಮರಣದ ನಂತರ, ಹಿಂದೂ ಮಹಿಳೆ ಅವನ ಆಸ್ತಿಯ ಲಾಭವನ್ನು ಪಡೆಯಬಹುದು, ಆದರೆ ಅವಳು ಗಂಡನ ಆಸ್ತಿಯ ಮೇಲೆ ಸಂಪೂರ್ಣ ಹಕ್ಕು ಹೊಂದಿರುವುದಿಲ್ಲ ಎಂದು ತಿಳಿಸಿದೆ.
ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರು, ಸ್ವಂತದ ಯಾವುದೇ ಆದಾಯವಿಲ್ಲದ ಹಿಂದೂ ಮಹಿಳೆಯು ತನ್ನ ಮರಣಿಸಿದ ಗಂಡನ ಆಸ್ತಿಯನ್ನು ತನ್ನ ಜೀವನದುದ್ದಕ್ಕೂ ಅನುಭವಿಸಬಹುದು, ಆದರೆ ಅವಳು ಎಂದಿಗೂ ಅವನ ಆಸ್ತಿಯ ಮೇಲೆ ಸಂಪೂರ್ಣ ಹಕ್ಕುಗಳನ್ನು ಹೊಂದಿಲ್ಲ ಎಂದು ಹೇಳಿದರು.
ಉಯಿಲಿನ ಮೂಲಕವೇ ಆಸ್ತಿಯಲ್ಲಿ ಪತ್ನಿ ಹಕ್ಕು ಪಡೆಯುತ್ತಾಳೆ ಎಂದು ಹೈಕೋರ್ಟ್ ಹೇಳಿದೆ. ಪತಿ ಸಾಯುವವರೆಗೂ ಆಕೆಗೆ ಆಸ್ತಿಯಲ್ಲಿ ಹಕ್ಕು ಇರಲಿಲ್ಲ. ಆದ್ದರಿಂದ ಮೃತ ಪತಿಯ ಆಸ್ತಿಯಿಂದ ಗಳಿಸಿದ ಆದಾಯದ ಲಾಭವನ್ನು ಪಡೆಯಲು ಹೆಂಡತಿಗೆ ಹಕ್ಕಿದೆ, ಆದರೆ ಇದನ್ನು ಸಂಪೂರ್ಣ ಹಕ್ಕು ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

