Breaking News

ಬಾಗಲಕೋಟೆ ಅಜ್ಜಿ ಸಾವಿಗೆ ಬಿಗ್ ಟ್ವಿಸ್ಟ್: 7 ತಿಂಗಳ ಬಳಿಕ ಮಗ, ಸೊಸೆಯ ಕೃತ್ಯ ಬಯಲು

ಬಾಗಲಕೋಟೆ: ಬೀಳಗಿ ಪಟ್ಟಣದಲ್ಲಿ ಏಳು ತಿಂಗಳ ಹಿಂದೆ ನಡೆದಿದ್ದ 65 ವರ್ಷದ ಗೌರವ್ವ ಕೊಡೆಕಲ್ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಕಿರಿಯ ಮಗ ಪಡಿಯಪ್ಪ, ಸೊಸೆ ಶಾಂತವ್ವ ಹಾಗೂ ಆಕೆಯ ಸಹೋದರಿಯ ಮಗ ಶಂಕರ್‌ನನ್ನು ಬಂಧಿಸಿದ್ದಾರೆ. ಮಾರ್ಚ್ 18ರ ರಾತ್ರಿ ಬೀರದೇವರ ದೇವಸ್ಥಾನದಲ್ಲಿ ಮಲಗಿದ್ದ ಗೌರವ್ವ ಅವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಆರೋಪಿಗಳ ಪತ್ತೆಗೆ ಪೊಲೀಸರು AI ತಂತ್ರಜ್ಞಾನ ಬಳಸಿದ್ದು, 30 ಸಾವಿರಕ್ಕೂ ಹೆಚ್ಚು ಜನರ ಗುರುತಿನ ಚೀಟಿ ಪರಿಶೀಲಿಸಿದ್ದರು. ಗೌರವ್ವ ಹೆಸರಿನಲ್ಲಿದ್ದ ಐದು ಎಕರೆ ಆಸ್ತಿ ಹಾಗೂ ಸೊಸೆಯ ಅನೈತಿಕ ಸಂಬಂಧದ ವಿಚಾರವೇ ಕೊಲೆಗೆ ಕಾರಣ ಎನ್ನಲಾಗಿದೆ. ಸತತ ತನಿಖೆಯ ಬಳಿಕ ಕುಟುಂಬಸ್ಥರೇ ಕೊಲೆಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Share News

About BigTv News

Check Also

ಟ್ರ್ಯಾಕ್ಟರ್ ಗೆ ದಾರಿ ಬಿಡದ ವಿಚಾರಕ್ಕೆ ಗಲಾಟೆ,ದೊಣ್ಣೆಯಿಂದ ಹೊಡೆದು ಹಲ್ಲೆ

ಚಿಕ್ಕಮಗಳೂರು: ತಾಲೂಕಿನ ಸಗನೀಪುರ ಗ್ರಾಮದಲ್ಲಿ ಟ್ರ್ಯಾಕ್ಟರ್‌ಗೆ ದಾರಿ ಬಿಡದ ವಿಚಾರಕ್ಕೆ ವ್ಯಕ್ತಿಯೊಬ್ಬರ ಮೇಲೆ ಮರದ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ …

Leave a Reply

Your email address will not be published. Required fields are marked *