Breaking News

ಕೋಲ್ಕತ್ತಾದಲ್ಲಿ ಹೊಸ ಸೆಮಿಕಂಡಕ್ಟರ್‌ ಘಟಕ ಸ್ಥಾಪನೆ

ನವದೆಹಲಿ: ಭಾರತದೊಂದಿಗೆ ಬಾಂಧವ್ಯವನ್ನು ಬಲಪಡಿಸಲು ಅಮೆರಿಕ ಉತ್ಸುಕವಾಗಿದೆ ಎಂದು ಸೂಚಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಮೆರಿಕದ ರಕ್ಷಣಾ ಸಂಸ್ಥೆ ಜನರಲ್ ಅಟಾಮಿಕ್ಸ್‌ನಿಂದ 31 ದೀರ್ಘಾವಧಿಯ ಎಂಕ್ಯೂ-9ಬಿ ಸಶಸ್ತ್ರ ಡ್ರೋನ್‌ಗಳ ಖರೀದಿ ಪ್ರಗತಿ ಹಾಗೂ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಹೊಸ ಸೆಮಿಕಂಡಕ್ಟರ್ ಘಟಕ ಸ್ಥಾಪನೆ ಕುರಿತು ಮಾತನಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಂವಾದದಲ್ಲಿ ಜೋ ಬೈಡನ್, ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ವಿಲಿಟರಿ ನಂಟನ್ನು ಹೆಚ್ಚಿಸುವ ಮಾರ್ಗಗಳು ಸೇರಿದಂತೆ ಉಭಯ ದೇಶಗಳ ನಡುವಿನ ವಿವಿಧ ವಿಚಾರಗಳ ಕುರಿತು ವ್ಯಾಪಕ ಮಾತುಕತೆ ನಡೆಸಿದ್ದಾರೆ. ಫೆಬ್ರವರಿಯಲ್ಲಿ ಸುಮಾರು 4 ಬಿಲಿಯನ್ ಡಾಲರ್‌ಗೆ 31 ಎಂಕ್ಯೂ-9ಬಿ ಡ್ರೋನ್‌ಗಳನ್ನು ಭಾರತೀಯ ಮಿಲಿಟರಿಗೆ ಮಾರಾಟ ಮಾಡಲು ಯುಎಸ್ ಫೆಬ್ರವರಿಯಲ್ಲಿ ಅನುಮೋದಿಸಿತ್ತು. ಈ ಪೈಕಿ 16 ಭಾರತೀಯ ವಾಯುಪಡೆ ಮತ್ತು 15 ನೌಕಪಡೆಗೆ ಸೇರಲಿವೆ.
ಡ್ರೋನ್ ಖರೀದಿ ಸಂಬಂಧ ಮುಂದಿನ ತಿಂಗಳೊಳಗೆ ಉಭಯ ದೇಶಗಳು ಔಪಚಾರಿಕವಾಗಿ ಒಪ್ಪಂದವನ್ನು ಮುಕ್ತಾಯಗೊಳಿಸುವ ಸಾಧ್ಯತೆಯಿದೆ. ಕೋಲ್ಕತ್ತಾದಲ್ಲಿನ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕ ಸ್ಥಾಪನೆ ಸಂಬಂಧ ನರೇಂದ್ರ ಮೋದಿ ಹಾಗೂ ಬೈಡನ್ ಮಾತುಕತೆ ನಡೆಸಿದ್ದಾರೆ. ಭಾರತ್ ಸಮಿ, ಥರ್ಡಿ ಟೆಕ್ ಮತ್ತು ಯುಎಸ್ ಸ್ಪೇಸ್ ಪೋರ್ಸ್ ನಡುವಿನ ಕಾರ್ಯತಂತ್ರದ ತಂತ್ರಜ್ಞಾನ ಪಾಲುದಾರಿಕೆ ಮತ್ತು ಭಾರತದ ಸೆಮಿಕಂಡಕ್ಟರ್ ಮಿಷನ್ ಸಹಯೋಗದಲ್ಲಿ ಈ ಘಟಕವನ್ನು ಸ್ಥಾಪಿಸಲಾಗುತ್ತಿದೆ ಎಂದು ಶ್ವೇತ ಭವನ ಹೇಳಿಕೆಯಲ್ಲಿ ತಿಳಿಸಿದೆ.

Share News

About BigTv News

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *