Breaking News

ಕಳೆದ 5 ದಿನಗಳ ನಂತರ ಭಾರತದಲ್ಲಿ ಚಿನ್ನದ ಬೆಲೆ 900 ರೂಪಾಯಿಗಳಷ್ಟು ಕುಸಿದಿದೆ…

ಕಳೆದ 5 ದಿನಗಳ ನಂತರ ಭಾರತದಲ್ಲಿ ಚಿನ್ನದ ಬೆಲೆ 900 ರೂಪಾಯಿಗಳಷ್ಟು ಕುಸಿದಿದೆ, ಅದಾದ ಬಳಿಕ ಇಂದು ಚಿನ್ನದ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 300 ರೂಪಾಯಿ ಏರಿಕೆಯಾಗಿ, 56,000 ರೂಪಾಯಿ ಆಗಿದೆ. 24 ಕ್ಯಾರೆಟ್ ಹಳದಿ ಲೋಹದ ಬೆಲೆ 330 ರೂಪಾಯಿ ಏರಿಕೆಯಾಗಿದ್ದು, 61,090 ರೂಪಾಯಿಗೆ ತಲುಪಿದೆ.ನವೆಂಬರ್ 1ರಿಂದ ಈವರೆಗೆ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 1200 ರೂಪಾಯಿ ಏರಿಕೆಯನ್ನು ಕಂಡಿದ್ದರೆ, 500 ರೂಪಾಯಿಯಷ್ಟು ಇಳಿಕೆಯಾಗಿದೆ.

ಎಂಸಿಎಕ್ಸ್ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 60,000 ರೂಪಾಯಿಗಿಂತ ಅಧಿಕವಾಗಿದೆ. ಆದರೆ ಸ್ಪಾಟ್ ಗೋಲ್ಡ್ ದರವು ಪ್ರಸ್ತುತ ಪ್ರತಿ ಔನ್ಸ್‌ಗೆ 11,958 ಡಾಲರ್ ಸಮೀಪದಲ್ಲಿದೆ. ಮತ್ತೊಂದೆಡೆ, ನವೆಂಬರ್ 10 ರಂದು ಎಂಸಿಎಕ್ಸ್ ಬೆಳ್ಳಿಯ ದರವು ಪ್ರತಿ ಕೆಜಿಗೆ 70,998 ಕ್ಕೆ ವಹಿವಾಟು ಪ್ರಾರಂಭಿಸಿದೆ. 71,155 ರೂಪಾಯಿ ದಿನದ ಕನಿಷ್ಠ ಮಟ್ಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ, ಬೆಳ್ಳಿ ಬೆಲೆ ಇಂದು ಪ್ರತಿ ಔನ್ಸ್‌ಗೆ 22.70 ಡಾಲರ್‌ನ ರ ಸಮೀಪದಲ್ಲಿದೆ.

Share News

About BigTv News

Check Also

ಕಮಿಷನರ್ ಬಂದಿದ್ದು 2–3 ದಿನ..! ಇನ್ಸ್‌ಪೆಕ್ಟರ್ ಯಾರು, ಪಿಎಸ್ಐ ಯಾರು ಅನ್ನೋದೇ ಗೊತ್ತಿಲ್ಲ..!

ಹುಬ್ಬಳ್ಳಿ-ಧಾರವಾಡ: ನೂತನ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ಹುಬ್ಬಳ್ಳಿಗೆ ಬಂದು ಇನ್ನೂ ಎರಡರಿಂದ ಮೂರು ದಿನಗಳಷ್ಟೇ ಆಗಿದೆ… ಹೊಸ …

Leave a Reply

Your email address will not be published. Required fields are marked *