Breaking News

ಸಿದ್ದರಾಮಯ್ಯ ವಿರುದ್ಧ ಗುಡುಗಿದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ

ಹುಬ್ಬಳ್ಳಿ: ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದಾರೆ, ನಾವು ಭಿಕ್ಷೆ ಕೊಟ್ಟಿದ್ದೇವೆ, ಧರ್ಮಕ್ಕೆ ಕೊಟ್ಟಿದ್ದೇವೆ ಅಂತ ನೀವು ಹೇಳಿಕೊಳ್ಳುತ್ತಿದ್ದೀರಿ ಯಾವ ಕ್ಷೇತ್ರವನ್ನು ಬಿಜೆಪಿ ಅವರಿಗೆ ಭಿಕ್ಷೆ ಕೊಟ್ಟಿದ್ದೀರಿ ಬಹಿರಂಗಪಡಿಸಿ ಯಾರು ಭಿಕ್ಷೆ ಕೊಟ್ರು, ಯಾರು ತೆಗೆದುಕೊಂಡ್ರು ಅಂತ ಬಹಿರಂಗಪಡಿಸಲಿ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಕುಮಾರ್ ಬಂಗಾರಪ್ಪ ಮತ್ತಿತರರ ಸಭೆ ವಿಚಾರವಾಗಿ ಮಾತನಾಡಿದ ಅವರು,ಭ್ರಷ್ಟಾಚಾರಿಗಳೆಲ್ಲ ಜೈಲು ಸೇರಲಿ ಭ್ರಷ್ಟರೆಲ್ಲ ಜೈಲಿಗೆ ಹೋದರೆ ಹೊಸ ರಾಜಕೀಯ ಯುಗ ಆರಂಭಗೊಳ್ಳುತ್ತೆ, ಬೆಂಗಳೂರು ಸೇರಿ ರಾಜ್ಯದ ಎಲ್ಲ ಕಡೆಯೂ ಬಿಜೆಪಿಯಲ್ಲಿ ಶುದ್ದಿಕರಣ ನಡೆಯಬೇಕಿದೆ ಹಲವು ಸಮಾನ ಮನಸ್ಕರು ಸಭೆ ಮಾಡಿದ್ದೇವೆ, ಹೊಂದಾಣಿಕೆ ರಾಜಕಾರಣದಿಂದಲೇ ರಾಜ್ಯಕ್ಕೆ ಇಂತಹ ದುಸ್ಥಿತಿ ಬಂದಿದೆ ಹೊಂದಾಣಿಕೆ ರಾಜಕಾರಣ ಹಿನ್ನೆಲೆಯಲ್ಲಿಯೇ ಇಷ್ಟೆಲ್ಲ ಪ್ರಕರಣ ಹೊರಬರುತ್ತವೆ, ಅಡ್ಜಸ್ಟ್ಮೆಂಟ್ ಮುಕ್ತ ಕರ್ನಾಟಕ ಆಗಬೇಕೆನ್ನುವುದು ನಮ್ಮ ಆಗ್ರಹ ಪಕ್ಷದ ವೇದಿಕೆಯಲ್ಲಿ ಏನು ಹೇಳಬೇಕು ಅದನ್ನು ಹೇಳಿದ್ದೇವೆ ಏನು ಕ್ರಮ ಕೈಗೊಳ್ಳುತ್ತಾರೆ ಅನ್ನೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

Share News

About Shaikh BigTv

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *