Breaking News

ಗಂಗಾನದಿ ನೀರಿನಿಂದ‌ ಬಿಜೆಪಿಯನ್ನು ಶುದ್ಧೀಕರಣ ಮಾಡುತ್ತೇವೆ: ಬಸನಗೌಡ ಪಾಟೀಲ ಯತ್ನಾಳ

ಹುಬ್ಬಳ್ಳಿ: ಬಿಜೆಪಿಯನ್ನು ಗಂಗಾನದಿ ನೀರಿನಿಂದ ಶುದ್ಧೀಕರಣ ಮಾಡುತ್ತೇವೆ, ದೇಶದಲ್ಲಿ ಮತ್ತು ರಾಜ್ಯದಲ್ಲಿಯೂ ಕ್ಲೀನ್ ಆಗಬೇಕು ಗಂಗಾ ನದಿ ನೀರನ್ನು ತರಲು ಕಳಿಸಿದ್ದೇವೆ ಅದು ಬಂದ ನಂತರ ಸ್ವಚ್ಛತಾ ಕಾರ್ಯ ಆರಂಭವಾಗುತ್ತೆ ಬಿಜೆಪಿ ಪಕ್ಷ ಕಚೇರಿಯಿಂದ ಹಿಡಿದು ಎಲ್ಲ ಸ್ವಚ್ಛಗೊಳಿಸುತ್ತೇವೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಎಲ್ಲ ಕಡೆಯೂ ಬಿಜೆಪಿಯಲ್ಲಿ ಸ್ವಚ್ಛವಾಗಬೇಕು ಇಡೀ ಕರ್ನಾಟಕದಲ್ಲಿ ಬಹಳ ಕಡೆ ಸ್ವಚ್ಛ ಆಗಬೇಕಿದೆ, ಬೀದರ್ ನಿಂದ ಹಿಡಿದು ಚಾಮರಾಜನಗರದವರೆಗೂ ಸ್ವಚ್ಛವಾಗಬೇಕಿದೆ ಎಂದರು.

ಈಶ್ವರಪ್ಪರಿಂದ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ರಚನೆ ವಿಚಾರ ಕುರಿತು ನಾವು ಎಲ್ಲಿಯೂ ಆರ್‌ಸಿಬಿ ತಂದಿಲ್ಲ, ಈಶ್ವರಪ್ಪ ಅವರನ್ನು ಬಿಜೆಪಿಗೆ ಮರಳಿ ತೆಗೆದುಕೊಳ್ಳುವುದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ ಅವರನ್ನು ತೆಗೆದುಕೊಳ್ಳಬೇಕೆಂದು ಹೈಕಮಾಂಡ್ ನಿರ್ಧರಿಸಿದರೆ ನಾವು ಸ್ವಾಗತಿಸುತ್ತೇವೆ ಈಶ್ವರಪ್ಪ ಅವರ ನಡೆ ಹಿಂದುತ್ವದ ಕಡೆ ಈಶ್ವರಪ್ಪ ಅವರ ನಡೆ ಬಿಜೆಪಿ ಕಡೆ, ಹಿಂದೂ ಸಮಾಜಕ್ಕೆ ಸಿದ್ದರಾಮಯ್ಯ ಸರ್ಕಾರದಿಂದ ಬಹುದೊಡ್ಡ ಅನ್ಯಾಯ ದಲಿತರಿಗೂ ದೊಡ್ಡ ಅನ್ಯಾಯವಾಗಿದೆ, ಪಿಎಸ್ಐ ಬಂದು ಗಣೇಶನನ್ನು ಬಂಧಿಸೋ ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಹಿಂದುಳಿದ ದಲಿತರಿಗೂ ಉಪಯೋಗವಾಗಿಲ್ಲ ಮೇಲ್ಜಾತಿಯವರೆಂದರೆ ಸಿದ್ದರಾಮಯ್ಯ ರಿಗೆ ಅಲರ್ಜಿ ಉಳಿದಿದ್ದು ಒಂದೇ ಒಂದು ಸಮಾಜ, ಅದರ ಓಲೈಕೆ ನಡೆದಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ ತಿಳಿಸಿದ್ದಾರೆ .

Share News

About Shaikh BigTv

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *