ಹುಬ್ಬಳ್ಳಿ: ಕಾಂಗ್ರೆಸ್ ರಾಜ್ಯಪಾಲರ ಟೆಲಿಫೋನ್ ಕದ್ದಾಲಿಸುವ ಪ್ರಯತ್ನ ಮಾಡಿತ್ತು, ಕರ್ನಾಟಕದಲ್ಲಿರೋದು ಎರಡನೇ ಮಮತಾ ಬ್ಯಾನರ್ಜಿ ಸರ್ಕಾರ ಸಂವಿಧಾನ ಬದಲಾವಣೆ ಮಾಡ್ತೀನಿ ಹೊಸ ಕಾನೂನು ತರ್ತೀನಿ ಅಂದ್ರೆ ಆಗಲ್ಲ ರಾಜ್ಯಾಂಗದಲ್ಲಿ ಹೊಸ ನಿಯಮ ತರೋದಕ್ಕೆ ಬರಲ್ಲ ಸಂವಿಧಾನ ಪ್ರಕಾರವೇ ಎಲ್ಲವೂ ನಡೆಯುತ್ತೆ ಸಿದ್ದರಾಮಯ್ಯ ಮತ್ತು ಡಿಕೆಶಿ ಪ್ರಕಾರ ಈ ದೇಶ, ರಾಜ್ಯ ನಡೆಯಲ್ಲ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ರಾಜ್ಯಪಾಲರು ಬಿಜೆಪಿ ಏಜೆಂಟ್ ರಂತೆ ಕೆಲಸ ಮಾಡ್ತಿದ್ದಾರೆ ಅನ್ನೋ ವಿಚಾರವಾಗಿ ಮಾತನಾಡಿದ ಅವರು, ರಾಜಪಾಲರ ಅಧಿಕಾರ ಮೊಟಕು ಯತ್ನಗಳನ್ನು ನಡೆಸಿದ್ದಾರೆ ರಾಜ್ಯಪಾಲರ ಟೆಲಿ ಫೋನ್ ಕದ್ದಾಲಿಸುವ ಪ್ರಯತ್ನವನ್ನು ಮಾಡಿದ್ದಾರೆ, ಆದರೆ ಅದರಲ್ಲಿ ಸಫಲವಾಗಿಲ್ಲ ಎಲ್ಲಾ ಪಕ್ಷದಲ್ಲಿ ಇದೊಂದು ಚಟಾ ಬಿದ್ದಿದೆ. ಹಿಂದೆ ಇದ್ದ ಭಾರದ್ವಾಜ ಕಾಂಗ್ರೆಸ್ ಚಮಚ ಬಿಜೆಪಿಯದ್ದೇನಾದ್ರೂ ಇದ್ರೆ ತಗೊಂಡು ಬರ್ರಿ ಅಂತಿದ್ರೂ ಲೇಕೆ ಆವೊ, ಲೇಕೆ ಆವೊ ಅಂತಿದ್ದಾ, ಈಗಿನ ಕಾಂಗ್ರೆಸ್ ನವರು ಅವರಂತೆ ನಡೆಯಬೇಕು ಅಂತಾರೆ ರಾಜ್ಯಪಾಲರು ಅವರಂತೆ ಹೇಗೆ ನಡೀತಾರೆ ನ್ಯಾಯಾಲಯದಲ್ಲಿ ರಾಜ್ಯಪಾಲರ ನಿರ್ಣಯ ತಪ್ಪಾಗಿದ್ರೆ ಅವರು ಬಿಜೆಪಿ ಏಜೆಂಟ್ ಆಗ್ತಿದ್ರು ರಾಜ್ಯಪಾಲರು ಒಬ್ರು ದಲಿತರೇ ಇದ್ದಾರೆ ಈಗ ನೀವು ಯಾರಿಗೆ ಅಪಮಾನ ಮಾಡ್ತಿದ್ದೀರಿ ನಿಮಗೆ ದಲಿತರ ಬಗ್ಗೆ ಎಷ್ಟು ಕಾಳಜಿ ಇದೆ ಅನ್ನೋದು ತೋರಿಸಿಕೊಡ್ತಿದ್ದೀರಿ ಎಂದು ಬಸನಗೌಡ ಪಾಟೀಲ ಯತ್ನಾಳ್ ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

