ಟೋಕಿಯೊ: ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ತಮ್ಮ ಸಂಪುಟದೊಂದಿಗೆ ರಾಜೀನಾಮೆ ನೀಡಿದ್ದು, ಇಂದು ಕ್ಯಾಬಿನೆಟ್ ಸಭೆ ನಡೆಸಿದ ಕಿಶಿದಾ ಅವರು ಚರ್ಚೆ ನಡೆಸಿ ನಂತರ ಸಂಪುಟ ಸಚಿವರೊಂದಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಮಾಸಾ ಹಯಾಶಿ ಘೋಷಿಸಿದ್ದಾರೆ. ತಮ್ಮ ಉತ್ತರಾಧಿಕಾರಿ ಶಿಗೆರು ಇಶಿಬಾ ಅವರು ಅಧಿಕಾರ ವಹಿಸಿಕೊಳ್ಳಲು ದಾರಿ ಮಾಡಿಕೊಟ್ಟದ್ದಾರೆ.
ಈಗಾಗಲೆ ಲಿಬರಲ್ ಡೆಮಾಕ್ರಟಿಕ್ ಪಕ್ಷದ ನಾಯಕಿಯಾಗಿ ಇಶಿಬಾ ಆಯ್ಕೆಯಾಗಿದ್ದು ಸಂಸತ್ತಿನ ಮತದಾನದ ನಂತರ ದೇಸದ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆ ಪಾತ್ರವಾಗಲಿದ್ದಾರೆ. ತಮ್ಮ ಅಧಿಕಾರಾವಧಿ ಮೂರು ವರ್ಷ ಕೊನೆಗೊಳ್ಳುವ ಮೊದಲೇ ತಮ್ಮ ರಾಜೀನಾಮೆಯನ್ನು ಒಂದು ತಿಂಗಳ ಹಿಂದೆಯೇ ಘೋಷಿಸಿದರು. 2021ರಲ್ಲಿ ಕಿಶಿದಾ ಅಧಿಕಾರ ವಹಿಸಿಕೊಂಡಿದ್ದರು ಆದರೆ ಅವರ ಆಡಳಿತದಲ್ಲಿ ಹವವಾರು ಹಗರಣಗಳು ಕೇಳಿಬಂದ ಹಿನ್ನಲೆಯಲ್ಲಿ ಅವರನ್ನು ಪ್ರಧಾನಿ ಪಟ್ಟದಿಂದ ಕಿಳಗಿಳಿಸಲು ಲಿಬರಲ್ ಪಕ್ಷವು ನಿರ್ಧರಿಸಿತ್ತು, ಈಗ ಹೊಸ ನಾಯಕಿಯನ್ನು ಪರಿಚಯಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

