Breaking News

ಮೈಸೂರು :ಪತಿಗೆ ಪತ್ನಿಯಿಂದ ಕೊಲೆ ಬೆದರಿಕೆ: 5 ಮಂದಿ ವಿರುದ್ದ FIR ದಾಖಲು!

ಕೌಟುಂಬಿಕ ಕಲಹ ಹಿನ್ನಲೆ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋದ ಪತಿಗೆ ಪತ್ನಿಯೇ ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಪತ್ನಿ,ಅತ್ತೆ ಸೇರಿದಂತೆ 6 ಮಂದಿ ವಿರುದ್ದ ಪತಿ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಜಾತಿವಿಚಾರದಲ್ಲಿ ಉಷಾ ಹಾಗೂ ಅತ್ತೆ ರಾಜಲಕ್ಷ್ಮಿ ನಿಂದನೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ.ಇದರಿಂದ ಬೇಸತ್ತ ರಾಜೇಶ್ ಕುಮಾರ್ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಪ್ರತಿತಿಂಗಳು 25 ಸಾವಿರ ಜೀವನಾಂಶ ಪಾವತಿಸುತ್ತಾ ಬಂದಿದ್ದಾರೆ. ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ತಿರಸ್ಕೃತವಾಗಿದ್ದು ಹೈಕೋರ್ಟ್ ಮೊರೆ ಹೋಗಿದ್ದಾರೆ.ಈ ಬೆಳವಣಿಗೆ ನಂತರ ಉಷಾ, ರಾಜಲಕ್ಷ್ಮಿ, ಸುಂದರಮ್ಮ, ವರ್ಷಾ ರವರು ಮನೆಗೆ ಬಂದು ಬಾಗಿಲು ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೇಸ್ ಹಾಕಿದ ವಿಚಾರವನ್ನ ಪ್ರಸ್ತಾಪಿಸಿ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ರಾಜೇಶ್ ಕುಮಾರ್ 6 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *