Breaking News

ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಬಾವುಟ ಹಾರಾಟ: ಸ್ಥಳಕ್ಕೆ ಎನ್.ಶಶಿಕುಮಾರ್ ಭೇಟಿ

ಧಾರವಾಡ: ಧಾರವಾಡದ ಟಿಪ್ಪು ಸರ್ಕಲ್‌ನಲ್ಲಿರುವ ಕಂಬದ ಮೇಲೆ ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಬಾವುಟ ರಾಷ್ಟ್ರಧ್ವಜದ ಮೇಲ್ಬಾಗದಲ್ಲಿ ಹಾರಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಪೊಲೀಸ್‌ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, ದಲಿತ ಪರ ಸಂಘಟನೆಗಳು ಇಂದು ಗಾಂಧಿ ಜಯಂತಿ ಆಚರಣೆ ಮಾಡಿವೆ. ಕೆಲವರು ಧ್ವಜಗಳನ್ನು ಅಲ್ಲಿಆರೋಹಣ ಮಾಡಿ ಹೋಗಿದ್ದರು. ಅದೇ ಸ್ಥಳದಲ್ಲಿ ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಧ್ವಜ ಕಟ್ಟಿದ್ದರು. ಅದು ರಾಷ್ಟ್ರಧ್ವಜಕ್ಕಿಂತ ಸ್ವಲ್ಪ ಮೇಲೆ ಇತ್ತು. ಅದನ್ನು ಶಹರ ಠಾಣೆ ಪೊಲೀಸರ ಗಮನಕ್ಕೆ ತರಲಾಗಿತ್ತು. ಕೂಡಲೇ ಮಹಾನಗರ ಪಾಲಿಕೆ ಆ ಧ್ವಜವನ್ನು ತೆರವು ಮಾಡಿದೆ. ಈ ಬಗ್ಗೆ ನಾವೂ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

Share News

About Shaikh BigTv

Check Also

ಅಮಾಯಕರಿಗೆ ಕಳ್ಳರ ಪಟ್ಟ ಕಟ್ಟಿ ಥಳಿತ – ಮಾರಣಾಂತಿಕ ಹಲ್ಲೆ!

ಬೆಂಗಳೂರು: ವಾಹನ ಅಡ್ಡ ಬಂದ ವಿಚಾರಕ್ಕೆ ರಸ್ತೆಯಲ್ಲಿ ಜಗಳವಾಡುತ್ತಿದ್ದ ಇಬ್ಬರು ಯುವಕರನ್ನು ಕಳ್ಳರೆಂದು ಭಾವಿಸಿ ಸ್ಥಳೀಯರು ಅಟ್ಟಾಡಿಸಿ ಹಲ್ಲೆ ನಡೆಸಿದ …

Leave a Reply

Your email address will not be published. Required fields are marked *