Breaking News

ಅಮಂಗಳ ವಾರ ಮೈತ್ರಿ ಸರ್ಕಾರ ಪತನ! ಕುರ್ಚಿಯಿಂದ ಕೆಳಗಿಳಿದ ಕುಮಾರಸ್ವಾಮಿ

ಬೆಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸ ಬಹು ಮತ ಪಡೆಯಲು ಫೇಲ್ ಆಗಿದ್ದು, ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮಂಗಳವಾರ ಸಂಜೆ ಪತನವಾಗಿದೆ.ಕಾಂಗ್ರೆಸ್ ಮತ್ತು ಜೆಡಿಎಸ್ ಅತೃಪ್ತ ಶಾಸಕರು ಮುಂಬೈನಲ್ಲಿದ್ದು, ಸರಕಾರ ಅಲ್ಪ ಮತಕ್ಕೆ ಕುಸಿದು ಸದನದಲ್ಲಿ ಕುಮಾರಸ್ವಾಮಿ ರಾಜೀನಾಮೆ ಘೋಷಣೆ ಮಾಡಿದ್ದಾರೆ.ಮ್ಯಾಜಿಕ್ ನಂಬರ್ 103 ಆಗಿದ್ದು ಬಿಜೆಪಿ 105 ಶಾಸಕರ ಬೆಂಬಲ ಹೊಂದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪರ 99 ಶಾಸಕರು ಇದ್ದು ಕುಮಾರಸ್ವಾಮಿಗೆ ಸೋಲು ಕಂಡಿದೆ. ಧ್ವನಿ ಮತದ ಅಂಗೀಕಾರ ಬಳಿಕ ತಲೆ ಲೆಕ್ಕದ ಮೂಲಕ ವಿಶ್ವಾಸ ಮತ ಎಣಿಸಲಾಯಿತು. ಮೇ 23, 2018ರಲ್ಲಿ ಮೈತ್ರಿ ಸರ್ಕಾರ ಜಾರಿಗೆ ಬಂದಿದ್ದು , ಅಂದಿನಿಂದ ಕುರ್ಚಿಗೆ ರಾಜಕೀಯ ದೊಂಬರಾಟ ನಡೆದಿತ್ತು. ರಾಜ್ಯದಲ್ಲಿ ಇದರಿಂದ ನಿನ್ನೆ ಸಂಜೆಯಿಂದಲೇ 2 ದಿನ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸದನದಲ್ಲಿ ಈ ಬಗ್ಗೆ ಸುಮಾರು 1.30 ಗಂಟೆ ಕುಮಾರಸ್ವಾಮಿ ಮಾತನಾಡಿದರು. ಈ ವೇಳೆ ಮಾತನಾಡಿದ ಅವರು, ರಾಜಕೀಯದ ಈ ಬೆಳವಣಿಗೆ ಬಗ್ಗೆ ರಾಜ್ಯದ ಜನರಲ್ಲಿ ಕ್ಷಮೆ ಕೇಳಿದರು. ಸರ್ಕಾರ ಉಳಿಸಿಕೊಳ್ಳಲು ಹೊಸ ಶಾಸಕರ ಮನವಿ ಮೇರೆಗೆ ಪ್ರಯತ್ನಿಸಿದ್ದೇನೆ. ಟಿವಿ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಇಂದು ದೇಶ ಹಾಳು ಮಾಡುತ್ತಿವೆ. ನಿಮಗೆ ಒಳ್ಳೆಯ ಸುದ್ದಿ ಕೊಡಲು ಆಗದಿದ್ದರೆ ಬ್ಯುಸಿನೆಸ್ ಮಾಡಿ. ನಾನು ನನ್ನ ಬದುಕಿನ ಪ್ರತಿ ಕ್ಷಣ ಜನರಿಗಾಗಿ ಮೀಸಲು ಇಟ್ಟಿದ್ದೇನೆ. ಈಗ ಜನರಿಗಾಗಿ ಹುದ್ದೆ ತ್ಯಾಗ ಮಾಡುತ್ತಿದ್ದೇನೆ. ತಂದೆ ದೇವೇಗೌಡ ಅವರ ಗಮನಕ್ಕೆ ತಂದು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನಾನು ಕಷ್ಟದ ನಡುವೆ 14 ತಿಂಗಳು ದಿನ ದೂಡಿದ್ದೇನೆ. ಎಲ್ಲಾ ಅಧಿಕಾರಿಗಳು ನನಗೆ ಸಹಕಾರ ಮಾಡಿದ್ದಾರೆ. ನನ್ನ ನಿರ್ದೇಶನದಂತೆ ಅಧಿಕಾರಿಗಳು, ನೌಕರರರು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಸಾಲ ಮನ್ನಾ ಮೂಲಕ ರೈತರ ಕಣ್ಣೀರು ಒರೆಸಿದ್ದೇನೆ. ಭಾಷಣದಲ್ಲಿ ತಮ್ಮ ಸರ್ಕಾರದ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ರೈತರಿಗೆ ನಮ್ಮ ಸರ್ಕಾರದಿಂದ ಮೋಸ ಆಗಿಲ್ಲ.ರಾಜ್ಯದ ಜನರ ತೆರಿಗೆ ಹಣ ಪುಕ್ಕಟ್ಟೆ ಖರ್ಚು ಮಾಡಲು ಬಿಡಲಿಲ್ಲ. ತಪ್ಪು ಮಾಡಿದರೆ ಹೇಳಲಿ ಆದರೆ ಎಲ್ಲದಕ್ಕೂ ರಾಜಕೀಯ ಮಾಡುವುದು ತಪ್ಪು. ನಮ್ಮ ಸರ್ಕಾರ ನಿರ್ಲಕ್ಷ್ಯ ಸರಕಾರ ಅಲ್ಲ, ಉತ್ತಮ ಕೆಲಸ ಮಾಡಿದ್ದೇವೆ. ಯಾವ ಸರ್ಕಾರ ಮಾಡದ ಕೆಲಸ ಮಾಡಿ ಇತಿಹಾಸ ಸೃಷ್ಟಿ ಮಾಡಲು ಹೊರಟಿದ್ದೆವು. ಅಭಿವೃದ್ಧಿ ಮಾಡಿದ್ದೆ ತಪ್ಪಾ?, ನಾನೇನು ತಪ್ಪು ಮಾಡಿದ್ದೇನೆ?, ವಿಶ್ವಾಸ ಮತ ಮಾಡಲು ನಾನು ತಯಾರಿದ್ದೇನೆ. ಪಲಾಯನ ಮಾಡಲ್ಲ ಎಂದರು.ರಾಜಕೀಯ ದುರಾಸೆಗಾಗಿ ಬಿಜೆಪಿ ಹೀನ ಮಟ್ಟಕ್ಕೆ ಇಳಿದಿದೆ.ಸ್ಪೀಕರ್ ಕಿಡಿ: ಜುಲೈ 6ಕ್ಕೆ ಅತೃಪ್ತರು ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ಪತ್ರ ಸರಿ ಇರಲಿಲ್ಲ. ಆದರೆ ವಿಶ್ವನಾಥ್ ಅಂಥವರು ಸ್ಪೀಕರ್ ಹುದ್ದೆ ಬಗ್ಗೆ ಮಾತನಾಡುತ್ತಿದ್ದಾರೆ. ಜನತೆಗೆ ಗೊತ್ತು ಯಾರು ಏನು ಎಂದು. ನನಗೆ ಸಂಸ್ಕಾರ ಗೊತ್ತು. ಮಾತಿಗೆ ತಪ್ಪಿದರೆ ರಾಜೀನಾಮೆಗೂ ಸಿದ್ದನಿದ್ದೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.ಈ ಮೂಲಕ ಒಂದು ತಿಂಗಳ ರಾಜಕೀಯ ನಾಟಕ ಮುಕ್ತಾಯ ವಾಗಿದೆ. ಇನ್ನು ಇಂತಹ ನಾಟಕ ಆಗದೆ, ಜನರ ಪರ ಬಿಜೆಪಿ ಸರ್ಕಾರ ನಡೆಸಲಿ, ಅಲ್ಲಿ ಶಾಸಕರ ಕೀಳು ಆಟ ಆಗದಿರಲಿ ಎಂಬುದು ಕೋಟಿ ಕೋಟಿ ಜನರ ಆಶಯ. ಮತ ಎಣಿಕೆ ವೇಳೆ ಜೆಡಿಎಸ್, ಕಾಂಗ್ರೆಸ್ ನಾಯಕರು ಮೌನಕ್ಕೆ ಜಾರಿದ್ದು ಕಂಡು ಬಂತು. ಕುಮಾರಸ್ವಾಮಿ ಅವರ ಕಣ್ಣು ಕಣ್ಣೀರು ಕಂಡಿತು. ಬಿಜೆಪಿ ಪಾಳಯದಲ್ಲಿ ಹೊಸ ಹುಮ್ಮಸ್ಸು ಕಂಡು ಬಂತು.ಬಿಜೆಪಿ ವಿಜಯೋತ್ಸವ ಕಾಣುತ್ತಿದೆ.

Share News

About admin

Check Also

ಸಚಿವರಿಗೆ ಖಾತೆ ಹಂಚಿದ ಸಿಎಂ ಡಿಕೆಶಿ..! ಯಾರಿಗೆ ಯಾವ ಖಾತೆ ಸಿಕ್ಕಿತು..?

ಡಿಕೆಶಿ ಸರ್ಕಾರದಲ್ಲಿ ಖಾತೆ ಫಿಕ್ಸ್..! ಕೆಲವರಿಗೆ ಹಳೆ ಖಾತೆ, ಕೆಲವರಿಗೆ ಹೊಸ ಜವಾಬ್ದಾರಿ..! ಬೆಂಗಳೂರು: ಸಚಿವರಿಗೆ ಖಾತೆ ಹಂಚಿದ ಸಿಎಂ …

Leave a Reply

Your email address will not be published. Required fields are marked *