Breaking News

ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಧ್ವಜ ಹಾರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್

ಧಾರವಾಡ:ಧಾರವಾಡದಲ್ಲಿ ಟಿಪ್ಪು ಧ್ವಜವನ್ನು ಮೇಲೆ ಹಾರಿಸಿ, ಅದರ ಕೆಳಗಡೆ ರಾಷ್ಟ್ರಧ್ವಜ ಕಟ್ಟಲಾಗಿದೆ. ಇಲ್ಲಿ ರಾಷ್ಟ್ರದ್ರೋಹದ ಕೆಲಸ ನಡೆದಿದೆ. ತಕ್ಷಣ ಅಂತಹ ರಾಷ್ಟ್ರದ್ರೋಹಿಗಳನ್ನು ಬಂಧಿಸಿ ರಾಷ್ಟ್ರದ್ರೋಹಿ ಸೆಕ್ಷನ್ ಹಾಕಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಒತ್ತಾಯಿಸಿದ್ದಾರೆ.

ಧಾರವಾಡದ ರಿಗಲ್ ಸರ್ಕಲ್‌ನಲ್ಲಿರುವ ಕಂಬದ ಮೇಲೆ ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಧ್ವಜ ಹಾರಾಡಿದ್ದು, ಅದರ ಕೆಳಭಾಗದಲ್ಲಿ ರಾಷ್ಟ್ರಧ್ವಜ ಕಟ್ಟಿ ಅವಮಾನ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುವುದು ದೇಶಕ್ಕೇ ಅವಮಾನ ಮಾಡಿದಂತೆ. ಇಂತಹ ದ್ರೋಹಿಗಳನ್ನು ಮೇಲಿಂದ ಮೇಲೆ ಬಚಾವ್ ಮಾಡುವ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ. ಪೊಲೀಸ್ ಇಲಾಖೆ ಇಂತವರನ್ನು ಬಂಧನ ಮಾಡಬೇಕು. ಬೆಂಗಳೂರಿನಲ್ಲಿ ಸಿಎಂ ಶೂ ಕಟ್ಟಬೇಕಾದರೆ ಎಡಗೈಯಲ್ಲಿ ರಾಷ್ಟ್ರಧ್ವಜ ಹಿಡಿಯಲಾಗಿದೆ. ಇವರ ದೇಶಭಕ್ತಿ ಎಂತದ್ದು ಎಂದು ಗೊತ್ತಾಗುತ್ತದೆ. ಆ ಧ್ವಜಕ್ಕೆ ಏನು ಮರ್ಯಾದೆಯೇ ಇಲ್ಲವೇ? ಸಿಎಂ ಬೂಟು ಕಟ್ಟಬೇಕಾದರೆ ಧ್ವಜ ಬೂಟಿಗೆ ಹಾಗೂ ನೆಲಕ್ಕೆ ತಾಗುತ್ತಿದೆ. ಇದು ಅಪಮಾನ ಅಲ್ಲವೇ? ಸಿಎಂ ಇದನ್ನು ಗಮನಿಸಲಿಲ್ಲವೇ? ನಮ್ಮಲ್ಲಿ ರಾಷ್ಟ್ರಗೀತೆ ಹಾಗೂ ಧ್ವಜಕ್ಕೆ ಅಪಮಾನ ಮಾಡುವವರಿಗೆ ಕಠಿಣ ಶಿಕ್ಷೆ ಇಲ್ಲದಾಗಿದೆ ಎಂದರು.

Share News

About Shaikh BigTv

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *