ನವಲಗುಂದ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 155ನೇ ಹಾಗೂ ಭಾರತದ ಧೀಮಂತ ನಾಯಕ ದೇಶದ ಎರಡನೇ ಪ್ರದಾನಮಂತ್ರಿ ಲಾಲಬಹಾದ್ದೂರ ಶಾಸ್ತ್ರೀಯವರ 120ನೇ ಜನ್ಮದಿನಾಚರಣೆಯನ್ನು ಉಭಯ ಮಹಾವಿದ್ಯಾಲಯದ ಅಡಿಯಲ್ಲಿ ಆಚರಣೆ ಮಾಡಲಾಯಿತು.
ಜಯಂತಿ ನಿಮಿತ್ತ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಎಂ.ಎನ್ ಹಾರೋಗೇರಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಉಭಯ ಧೀಮಂತ ಮಹಾಪುರುಷರ ಕುರಿತು ಮಾತನಾಡಿದರು.
ನಂತರ ಕರ್ನಾಟಕ ಸರ್ಕಾರವು ಮಹಾತ್ಮಾ ಗಾಂಧಿಯವರ ಕನಸು ಮತ್ತು ಸಂದೇಶದ ತಿರುಳನ್ನು ಪ್ರತಿಜ್ಞಾವಿಧಿಯಾಗಿ ಸ್ವೀಕರಿಸಲು ಸರ್ಕಾರ ಆದೇಶ ನೀಡಿತ್ತು ಅದರ ಪ್ರಯುಕ್ತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ವಿ. ಬಡಿಗೇರ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಎಲ್ಲರೂ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಮಹಾ ನಾಯಕರ ಸಂದೇಶಕ್ಕೆ ಗೌರವ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಜಯರಾಮ ಲಮಾಣಿ, ಪದವಿ, ಪದವಿಪೂರ್ವ ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

