ಧಾರವಾಡ: ಚಿಗರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಧಾರವಾಡದ ಗಾಂಧಿನಗರದ ಬಳಿ ಸಂಭವಿಸಿದೆ.ರಾಜಸ್ಥಾನ ಮೂಲದ ವಿಜಯದಾನ್ (52) ಎಂಬಾತನೇ ಈ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ.
ಬಡಿಗತನ ಕೆಲಸ ಮಾಡುತ್ತಿದ್ದ ಈತ, ಗೋಪನಕೊಪ್ಪದಲ್ಲಿ ಮನೆ ಮಾಡಿಕೊಂಡು ವಾಸವಿದ್ದ. ಜೆಎಸ್‌ಎಸ್ ಕಾಲೇಜಿನಲ್ಲಿ ನಡೆಯುತ್ತಿದ್ದ ಕೆಲಸ ಮುಗಿಸಿಕೊಂಡು ಮರಳಿ ಮನೆ ಕೊಡೆ ಹೊರಟಿದ್ದ ಸಂದರ್ಭದಲ್ಲಿ ಜವರಾಯನ ರೂಪದಲ್ಲಿ ಬಂದ ಚಿಗರಿ ಬಸ್ಸು ಆತನ ಜೀವ ಬಲಿ ಪಡೆದಿದೆ.
ಬಸ್ಸಿನ ಕೆಳಭಾಗದಲ್ಲಿ ಸಿಲುಕಿಕೊಂಡಿದ್ದ ವಿಜಯದಾನ್ ಅವರನ್ನು ಪೊಲೀಸರ ಸಮ್ಮುಖದಲ್ಲಿ ಸ್ಥಳೀಯರು ಹೊರ ತೆಗೆದು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದೇ ಆತ ಅಸುನೀಗಿದ್ದಾನೆ. ಧಾರವಾಡ ಸಂಚಾರ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

