ಮೈಸೂರು: ವಿಶ್ವ ವಿಖ್ಯಾತ ದಸರಾ ಹಬ್ಬಕ್ಕೆ ಇಂದು ಅರಮನೆ ನಗರಿಯಲ್ಲಿ ವೈಭವದ ಚಾಲನೆ ದೊರೆಯಿತು ಮೈಸೂರು ದಸರಾದ ಉದ್ಘಾಟಕರಾದ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರು ಮಹಿಷಮರ್ಧಿನಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬಕ್ಕೆ ಚಾಲನೆ ನೀಡಿದರು.
ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ದೇವಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬಕ್ಕೆ ವೈಭವದ ಚಾಲನೆ ನೀಡಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಹಿತ ರಾಜ್ಯ ಸರ್ಕಾರದ ಪ್ರತಿನಿಧಿಗಳು, ಸಚಿವರು, ಶಾಸಕರು ದೇವಿಗೆ ಪುಷ್ಪಾರ್ಚನೆ ಮಾಡಿದರು.
ದಸರಾ ಉದ್ಘಾಟಕರಾದ ನಾಡೋಜ ಹಂಪ ನಾಗರಾಜಯ್ಯ ಅವರು, ಚಾಮುಂಡಿ ತಾಯಿಯನ್ನು ನೆನೆದು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಿ ಭಾಷಣ ಆರಂಭಿಸಿದರು, ಪವಿತ್ರ ದಸರಾ ಉದ್ಘಾಟನೆಯನ್ನು ನಾಡಿನ ಜನರ ಪರವಾಗಿ ವಿನಯ ಹಾಗೂ ಧನ್ಯತಾ ಭಾವದಿಂದ ಮಾಡಿದ್ದೇನೆ. ದಸರಾ ಹಬ್ಬ ಮತ ಧರ್ಮಗಳ ಮೀರಿದ ಹಬ್ಬ 10 ದಿನಗಳ ಕಾಲ ನಡೆಯುವ ಪರ್ವ ಈ ದಸರಾ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

