ಯಾದಗಿರಿ: ಸಾರ್ವಜನಿಕರಿಂದ ಮಟ್ಕಾ ಬುಕಿಂಗ್ ಮಾಡಿಕೊಳ್ಳುವ ವೇಳೆ ದಾಳಿ ನಡೆಸಿದ ಪೊಲೀಸ್ ₹350 ನಗದು, ಬುಕಿಂಗ್ ಚೀಟಿ ವಶಕ್ಕೆ ಪಡೆದು ಬುಕಿ ವಿರುದ್ಧ ಶುಕ್ರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಜಿಲ್ಲೆಯ ಶಹಪುರ ತಾಲ್ಲೂಕಿನ ಹಳಿಸಗರ ನಿವಾಸಿ ಸುಮಿತ್ರಪ್ಪ ನಾಗಪ್ಪ ಕುರುಕುಂದಿ ಎಂದು ಗುರುತಿಸಲಾಗಿದೆ. ನಗರದ ಹೊಸಳ್ಳಿ ಕ್ರಾಸ್ ಹತ್ತಿರ ವ್ಯಕ್ತಿಯೊಬ್ಬ ಮಟ್ಕಾ ನಂಬರ್ ಬರೆದುಕೊಳ್ಳುತ್ತಿರುವ ಖಚಿತ ಮಾಹಿತಿಯಂತೆ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜನಗೌಡ ದಾಳಿ ನಡೆಸಿದ್ದು, ದಾಳಿ ವೇಳೆ ಸಿಕ್ಕ ನಗದು, ಮಟ್ಕಾ ಚೀಟಿ, ಪೆನ್ ಮತ್ತು ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

