ನವದೆಹಲಿ : ನಾವು ಯುದ್ಧವನ್ನು ಬಯಸುತ್ತಿಲ್ಲ, ಆದರೆ ಇಸ್ರೇಲ್ ನಮ್ಮ ವಿರುದ್ಧ ತೋರುತ್ತಿರುವ ಧೋರಣೆ, ದಾಳಿಗಳು ನಾವು ಬಲವಾಗಿ ಪ್ರತಿಕ್ರಿಯಿಸುವಂತೆ ಮಾಡುತ್ತಿದೆ ಎಂದು ಇರಾನ್ ಪ್ರಧಾನಿ ಮಸೌದ್ ಪೆಜೆಶ್ಕಿಯನ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇರಾನ್ ಯುದ್ಧ ಬಯಸುತ್ತಿಲ್ಲ, ಯುದ್ಧಕ್ಕೆ ನಮ್ಮನ್ನೂ ಇಸ್ರೇಲ್ ಕೆಣಕುವ ಮೂಲಕ ಪ್ರಚೋದಿಸುತ್ತಿದೆ. ಹಾಗೇ ಮಾಡಿದಲ್ಲಿ ನಾವೂ ಸಹ ಸುಮ್ಮನೆ ಇರಲ್ಲ. ಬಲವಾದ ಪ್ರತಿಕ್ರಿಯೆ ನೀಡುತ್ತೇವೆ ಎಂದು ವಾರ್ನಿಂಗ್ ನೀಡಿದ್ದಾರೆ.
ಇಸ್ರೇಲ್ ಮೇಲೆ ಇರಾನ್ ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಸುಮಾರು 200 ಕ್ಷಿಪಣಿಗಳ ದಾಳಿ ನಡೆಸಿದ ಒಂದು ದಿನದ ನಂತರ ಪೆಜೆಶ್ಕಿಯಾನ್ ಈ ರೀತಿ ಪ್ರತಿಕ್ರಿಯೆ ನೀಡಿದ್ದು, ಲೆಬನಾನಿನ ಗಣರಾಜ್ಯದ ವಿರುದ್ಧ ಇಸ್ರೇಲಿ ವೈಮಾನಿಕ ದಾಳಿಗಳು ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ. ನೀವು ಯುದ್ಧಕ್ಕೆ ನಿಂತರೆ, ನಾವೂ ಪ್ರತಿಕ್ರಿಯೆ ಕೊಟ್ಟೆ ಕೊಡುತ್ತೇವೆ ಎಂಬ ನಿಲುವನ್ನು ಇರಾನ್ ಸದ್ಯ ತಾಳಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





