Breaking News

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ರೆಬೆಲ್ ಶಾಸಕ ನಾರಾಯಣಗೌಡ ಭಾಗಿ.

ಮಂಡ್ಯ: ಇಂದು ರಾಜ್ಯದಾದ್ಯಂತ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಈದ್ಗಾ ನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಸಂಭ್ರಮದಿಂದ ಬಕ್ರೀದ್ ಹಬ್ಬ ಆಚರಿಸಲಾಗುತ್ತಿದೆ. ಈ ವೇಳೆ ಬಂಡಾಯ ಶಾಸಕ ನಾರಾಯಣಗೌಡ ಸಾಮೂಹಿಕ ಪ್ರಾಥನೆಯಲ್ಲಿ ಭಾಗಿಯಾಗುವ ಮೂಲಕ ಜಾತಿಭೇಧ ಮರೆತು ಸಮಾನತೆ ಮೆರೆದರು.ಈ ವೇಳೆ ಅಭಿಮಾನಿಗಳು ಹೂಮಾಲೆ ಹಾಕಿ ಸ್ವಾಗತಿಸಿದರು.ಬಳಿಕ ಮಾತನಾಡಿದ ಅವರು, ಜೆಡಿಎಸ್ ಪಕ್ಷದೊಳಗಿನ ಆಂತರಿಕ ಕಲಹ, ತಾಲೂಕಿನ ಅಭಿವೃದ್ಧಿಗೆ ಹಣ ನೀಡಿಕೆಯಲ್ಲಿ ತಾರತಮ್ಯ ಮಾಡಿದ್ದನ್ನು ತಡೆಯಲಾಗದೇ ಮನನೊಂದು ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.‌ಹೊರಗಿನ ಬಾಡಿಗೆ ಜನರನ್ನು ಕರೆಸಿ ನನ್ನನ್ನು ಬಹಿರಂಗವಾಗಿ ಬಯ್ಯಿಸಿ ಸಂತೋಷಪಟ್ಟಿದ್ದಾರೆ.ಸ್ಪೀಕರ್ ರಮೇಶ್ ಕುಮಾರ್ ಅವರನ್ನು ದೇವರ ಸ್ಥಾನದಲ್ಲಿ ಕಂಡಿದ್ದೆ.‌ ಅವರು ನಮ್ಮ ಮೇಲೆ ಕೈಗೊಂಡ ಸೇಡಿನ ಕ್ರಮದಿಂದ ನಮಗೆ ನೋವಾಗಿದ್ದರೂ ಅವರಿಗೆ ಶುಭ ಕೋರುತ್ತೇನೆ. ಸುಪ್ರೀಂಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಗ್ಗೆ ನನಗೆ ಗೌರವವಿದೆ.ಮಾಜಿಸಚಿವ ಪುಟ್ಟರಾಜು ಅವರಿಗೂ ನನಗೂ ಹಣಕಾಸಿನ ವ್ಯವಹಾರವಿದೆ. ನಾನೇನಾದರೂ ಹಣ ಕೊಡಬೇಕೆಂದು ಅವರ ಪಟ್ಟಿಕೊಟ್ಟರೆ ನಾಳೆಯೇ ಲೆಕ್ಕ ಚುಕ್ತಾ ಮಾಡುತ್ತೇನೆ ಎಂದರು.ದೇವೇಗೌಡರ ಪುತ್ರಿ ಅನುಸೂಯಮಂಜುನಾಥ್ ನನಗೆ ಮಾತೃಸ್ವರೂಪಿಣಿಯಾಗಿದ್ದಾರೆ.ನನಗೆ ರಾಜಕೀಯ ಪುನರ್ಜನ್ಮ ನೀಡಿದ ತಾಯಿ ಅನುಸೂಯಕ್ಕ. ನಾನು ಆಸೆ ಆಮಿಷಗಳಿಗೆ ಬಲಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ.ಪುಟ್ಟರಾಜು ಅವರಿಗೂ ಪಕ್ಷದಲ್ಲಿ ಕಿರುಕುಳವಿದೆ. ಭಾರೀ ಬಿಗಿ ಭದ್ರತೆ ಶಾಸಕ ಸ್ಥಾನದಿಂದ ಅನರ್ಹಗೊಂಡ ನಂತರ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ನಾರಾಯಣಗೌಡ ಅವರಿಗೆ ಪೋಲಿಸರು ಬಿಗಿ ಭದ್ರತೆ ಒದಗಿಸಿದ್ದರು ಎಂದು ತಿಳಿಸಿದರು.ಬಕ್ರೀದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ನಂತರ ತಮ್ಮನ್ನು ಭೇಟಿಯಾದ ಸಾರ್ವಜನಿಕರ ಕುಂದುಕೊರತೆಗಳನ್ನು ನಾರಾಯಣಗೌಡ ಆಲಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಹೂಮಾಲೆ ಹಾಕಿ ಸ್ವಾಗತಿಸಿದ ನಾರಾಯಣಗೌಡರ ಅಭಿಮಾನಿಗಳು ಜಯಘೋಷಗಳನ್ನು ಕೂಗಿ ಸಂಭ್ರಮಿಸಿದರು.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *