Breaking News

ರಾಜ್ಯದ ಏಳು ರೈಲ್ವೆ ಯೋಜನೆಗಳೂ 2027 ಕ್ಕೆ ಪೂರ್ಣಗೊಳ್ಳಲಿವೆ : ವಿ.ಸೋಮಣ್ಣ ಭರವಸೆ

ಹುಬ್ಬಳ್ಳಿ: ಧಾರವಾಡ-ಬೆಳಗಾವಿ, ಶಿವಮೊಗ್ಗ- ಶಿಕಾರಿಪುರ ಸೇರಿ ಏಳು ಯೋಜನೆ ಆದಷ್ಟು ಬೇಗ ಪೂರ್ಣಗೊಳಿಸುತ್ತೇವೆ.ರಾಜ್ಯದ ಏಳು ರೈಲ್ವೆ ಯೋಜನೆಗಳೂ 2027 ಕ್ಕೆ ಪೂರ್ಣಗೊಳ್ಳಲಿವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ.

ನೈರುತ್ಯ ರೈಲ್ವೆ ಕೇಂದ್ರ ಕಛೇರಿಯಲ್ಲಿ ನಡೆಸಿದ ಸಭೆಯ ನಂತರ ಮಾತನಾಡಿದ ಅವರು, ಏಳೂ ಯೋಜನೆ ಜೂನ್ 2027 ಕ್ಕೆ ಪೂರ್ಣಗೊಳಿಸಿ ಉದ್ಘಾಟಿಸುತ್ತೇವೆ. ಧಾರವಾಡ- ಬೆಳಗಾವಿ 73 ಕಿಲೋ ಮೀಟ‌ರ್ ಭೂಸ್ವಾಧೀನ ನಡೆದಿದೆ. ಎರಡು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹಾಸನ-ಬೇಲೂರು ಭೂಸ್ವಾಧೀನದ ನಂತರ ಕಾಮಗಾರಿ ಆರಂಭಗೊಳಲಿದ್ದು, ಆರ್.ಒ.ಬಿ., ಆರ್.ಯು.ಬಿ ಗಳನ್ನೂ ಪೂರ್ಣಗೊಳಿಸ್ತೇವೆ ಎಂದು ಅವರು ಹೇಳಿದರು.

ನೈರುತ್ಯ ರೈಲ್ವೆ ವ್ಯಾಪ್ತಿಯ 43 ಸಾವಿರ ಕೋಟಿ ರೂಪಾಯಿ ಯೋಜನೆ ಪೂರ್ಣಗೊಳಿಸ್ತೇವೆ.

ಭೂಸ್ವಾಧೀನಕ್ಕೆ ಒಂದಷ್ಟು ತೊಡಕಾಗಿದೆ. ನಾಲೈದು ಬಾರಿ ಸಿಎಂ ಜೊತೆ ಚರ್ಚಿಸಿದ್ದೇವೆ. ಎಲ್ಲ ಡಿಸಿ ಗಳಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಶೇ. 50 ರಷ್ಟು ರಾಜ್ಯ ಸರ್ಕಾರ ಹಣ ಕೊಡಬೇಕಿತ್ತು. ಈಗ ಬರೀ ಭೂಮಿ ಕೊಡಲು ಮನವಿ ಮಾಡಿದ್ದೇವೆ. ಹೀಗಾಗಿ ಸಿಎಂ ಸಹ ಸಹಕಾರ ನಿಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

Share News

About Shaikh BigTv

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *