Breaking News

ಸಮಗ್ರ ಕೃಷಿ ಅಭಿಯಾನ ರಥಯಾತ್ರೆಗೆ ಚಾಲನೆ

ಮಂಡ್ಯ: ಜಿಲ್ಲೆಯ ಶೀಳನೆರೆ ಹೋಬಳಿಯ ತೆಂಡೇಕೆರೆ ಗ್ರಾಮದಲ್ಲಿ ಸಮಗ್ರ ಕೃಷಿ ಅಭಿಯಾನ ರಥಯಾತ್ರೆ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ಕೆ ಜಿಲ್ಲಾ ಪಂಚಾಯತ ಕೃಷಿಕೈಗಾರಿಕೆ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಚಾಲನೆ ನೀಡಿದರು. ಅನ್ನದಾತನಾದ ರೈತನು ಕೃಷಿಯಲ್ಲಿ ಲಾಭಗಳಿಸುವ ಬದಲಿಗೆ ಸಯಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸದೇ ಸತತವಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಅನ್ನದಾತ ರೈತನ ಮೊಗದಲ್ಲಿ ಮಂದಹಾಸ ಮೂಡಿಸಲು, ಬೇಸಾಯದಿಂದ ದೂರ ಸರಿಯುತ್ತಿರುವ ಯುವಜನಾಂಗವನ್ನು ಮರಳಿ ಬೇಸಾಯದತ್ತ ಆಕರ್ಷಿಸಲು ಸಮಗ್ರವಾದ ಕೃಷಿಪದ್ಧತಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ರೈತಬಾಂಧವರು ಕೃಷಿತಜ್ಞರ ಸಲಹೆ ಸೂಚನೆ ಹಾಗೂ ಮಾರ್ಗರ್ಶನ ಪಡೆದುಕೊಂಡು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಬೇಕು ಎಂದು ಮಂಜು ಕರೆ ನೀಡಿದರು. ಜಿಲ್ಲಾ ರೇಷ್ಮೆ ಇಲಾಖೆಯ ಉಪನಿರ್ದೇಶಕಿ ಪ್ರತಿಭಾ, ತಾಲ್ಲೂಕು ಪಂಚಾಯತ ಸದಸ್ಯೆ ಸುಶೀಲಮ್ಮ, ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಮ್ಮ, ಮಾಜಿಅಧ್ಯಕ್ಷ ಜವರಯ್ಯ, ಸದಸ್ಯರಾದ ಯಶೋಧರ, ರಮೇಶ್, ಮುಖಂಡರಾದ ಅಂಚನಹಳ್ಳಿ ಸುಬ್ಬಣ್ಣ, ಬೇಲದಕೆರೆ ನಂಜೇಗೌಡ, ಕೃಷಿ ಅಧಿಕಾರಿ ಜಯಶಂಕರ ಆರಾಧ್ಯ, ರಮೇಶ್, ಸತೀಶ್ ಮತ್ತಿತರರು ಭಾಗವಹಿಸಿದ್ದರು.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *