Breaking News

ಪೂರ್ವಭಾವಿ ಸಭೆ ಬಹಿಷ್ಕಾರ ಮಾಡಿದ ಅಧಿಕಾರಿಗಳು

ಕುಂದಗೋಳ : ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ ವಿಚಾರವಾಗಿ ಪೂರ್ವಭಾವಿ ಸಭೆ ಬಹಿಷ್ಕಾರ ಹಾಕಿದ ಸಮಾಜದ ಬಾಂಧವರನ್ನು ಸಂತೈಸುವ ಕೆಲಸವನ್ನು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಮಹರ್ಷಿ ವಾಲ್ಮೀಕಿ ಭವನ ನೆನೆಗುದಿಗೆ ಬಿದ್ದಿದೆ, ಜಾಗ ಹಂಚಿಕೆ ವಿಷಯವಾಗಿ ಪಟ್ಟಣ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಬಂಧಪಟ್ಟಂತೆ ಮುಂದಿನ ಕ್ರಮ ತಿಳಿಯುತ್ತಿಲ್ಲ ಎಂದು ಇತ್ತಿಚಿಗೆ ತಾಲೂಕಿನ ಎಸ್.ಸಿ ಮತ್ತು ಎಸ್.ಟಿ ಸಮಾಜ ಬಾಂಧವರು ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಬಹಿಷ್ಕರಿಸಿ ಪ್ರತಿಭಟನೆ ಎಚ್ಚರಿಕೆ ನೀಡಿದ್ದರು.

ಇದೀಗ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಮೀನಾಕ್ಷಿ ಗುದಗಿಯವರು ಮತ್ತು ತಹಶೀಲ್ದಾರ್‌ರ ಸಮಾಜದ ಬಾಂಧವರು ಜೊತೆ ಚರ್ಚಿಸಿ ಪುನಃ ಅಕ್ಟೋಬ‌ರ್ 7 ರಂದು ಸಭೆ ಕರೆದಿದ್ದು, ಪ್ರತಿಭಟನೆ ವಿಷಯವನ್ನೂ ಸಮಾಜದವರು ಕೈ ಬಿಟ್ಟಿದ್ದಾರೆ ಎಂದಿದ್ದಾರೆ.

ಸದ್ಯ ಅಕ್ಟೋಬರ್ 17 ರಂದು ಅದ್ದೂರಿಯಾಗಿ ಎಲ್ಲಾ ಸಮಾಜದ ಜೊತೆಗೂಡಿ ವಾಲ್ಮೀಕಿ ಜಯಂತಿ ಆಚರಣೆ ಮತ್ತು ವಾಲ್ಮೀಕಿ ಭವನ ನಿರ್ಮಾಣದ ವಿಷಯದಲ್ಲಿ ಅಧಿಕಾರಿಗಳು ಶಿಸ್ತು ಬದ್ಧ ಕಾರ್ಯ ಚಟುವಟಿಕೆ ಕೈಗೊಳ್ಳುವ ವಿಶ್ವಾಸ ಸಹ ವ್ಯಕ್ತಪಡಿಸಿದ್ದಾರೆ.

Share News

About Shaikh BigTv

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *