Breaking News

ದೇಶ 15 ಜಿಲ್ಲೆಗಳಿಗೆ ಐಎಂಡಿ ರೆಡ್‌ ಅಲರ್ಟ್‌ ಘೋಷಣೆ


ಹೊಸದಿಲ್ಲಿ: ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್‌ ಹಾಗೂ ಹರಿಯಾಣದಲ್ಲಿ ಭಾರೀ ಮಳೆ ಯಾಗಿದ್ದು, ಹಲವು ಸ್ಥಳಗಳಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಆ ಪ್ರಾಂತದಲ್ಲೆಲ್ಲ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಇದರ ನಡುವೆಯೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ದೇಶ 15 ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್‌ ಅಲರ್ಟ್‌ ಘೋಷಿಸಿದೆ.

ಮಹಾರಾಷ್ಟ್ರದ ಗಾಡಿcರೋಲಿಯಲ್ಲಿ ಹರಿ ಯುತ್ತಿರುವ ಕುಂಡಲಿಕಾ, ಅಂಬಾ, ಸಾವಿತ್ರಿ, ಪಾತಾಳಗಂಗಾ, ಉಲ್ಹಾಸ್‌ ಹಾಗೂ ಗಾರ್ಗಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.

ಹರಿಯಾಣದ ಅಂಬಾಲಾದಲ್ಲಿ ತಗ್ಗು ಪ್ರದೇಶ ಗಳಿಗೆ ನುಗ್ಗಿದ ನೀರನ್ನು ನಗರ ಸಭೆ ಅಧಿಕಾರಿಗಳು, ಸಿಬಂದಿ ಮೋಟಾರ್‌ ಪಂಪ್‌ ಬಳಸಿ ತೆರವುಗೊಳಿಸಿದ್ದಾರೆ.ಪಂಜಾಬ್‌, ಚಂಡೀಗಢದಲ್ಲಿ ಸೋಮವಾರ 64.5 ಮಿ.ಮೀ.ನಿಂದ 114.5 ಮಿ.ಮೀ.ನಷ್ಟು ಮಳೆಯಾಗಬಹುದೆಂದು ಐಎಂಡಿ ಎಚ್ಚರಿಸಿದೆ.ರಾಜಸ್ಥಾನದಲ್ಲಿ ಚಂಬಲ್‌ ನದಿಯ ದಡದಲ್ಲಿ ರುವ ಧೋಲಾರ್‌ಪುರ ನಗರದಲ್ಲಿ ಭಾರೀ ಮಳೆ ಸುರಿದ ಪರಿಣಾಮ ನದಿಯ ನೀರಿನ ಮಟ್ಟ ಏರಿಕೆ ಯಾಗಿ, ಆ ನೀರು ಊರಿನೊಳಗೆ ನುಗ್ಗಿದೆ.ಹಾಗಾಗಿ, ನದಿಗೆ ಹತ್ತಿರದಲ್ಲಿರುವ ನಗರದ ಕೆಲವು ಪ್ರಾಂತ ಗಳಲ್ಲಿ ಪ್ರವಾಹ ಆವರಿಸಿದೆ. ಸ್ಥಳೀಯ ಸಂಸ್ಥೆಗಳು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *